2.5 ಲಕ್ಷ ರೂ. ಲಂಚ: ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳ ಬಂಧನ
Wednesday, April 5, 2023
2.5 ಲಕ್ಷ ರೂ. ಲಂಚ: ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳ ಬಂಧನ
2.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕೃಷಿ ಇಲಾಖೆಯಿಂದ ಸಾಗುವಳಿಗೆ ಉಪಕರಣಗಳನ್ನು ಪೂರೈಸಿದ್ದ ಬಿಲ್ ಮಂಜೂರು ಮಾಡಲು 2.5 ಲಕ್ಷ ರೂ.ಗಳನ್ನು ನೀಡುವಂತೆ ಉನ್ನತ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಅದರಂತೆ ಹಣ ನೀಡುತ್ತಿದ್ದಾಗ ಇವರು ಸೆರೆ ಸಿಕ್ಕಿದ್ದಾರೆ.
ಗುಂಡ್ಲುಪೇಟೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್, ತಾಂತ್ರಿಕ ಕೃಷಿ ಅಧಿಕಾರಿ ಸತೀಶ್ ಮತ್ತು ಹೊರಗುತ್ತಿಗೆ ಗ್ರೂಪ್ ಡಿ ನೌಕರ ಅರುಣ್ ಅವರು ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು.
ಗುಂಡ್ಲುಪೇಟೆಯ ಎಸ್.ಆರ್. ಟ್ರೇಡರ್ ಮಾಲಿಕ ಕುಮಾರಸ್ವಾಮಿ ಈ ಬಗ್ಗೆ ಮಾರ್ಚ್ 31ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.