-->
NI Act: ಪತ್ನಿ ಮಾಲೀಕತ್ವದ ಸಂಸ್ಥೆಯ ಚೆಕ್ ಅಮಾನ್ಯಕ್ಕೆ ಪತಿ ಬಾಧ್ಯಸ್ಥನೇ..?- ಹೈಕೋರ್ಟ್ ತೀರ್ಪು

NI Act: ಪತ್ನಿ ಮಾಲೀಕತ್ವದ ಸಂಸ್ಥೆಯ ಚೆಕ್ ಅಮಾನ್ಯಕ್ಕೆ ಪತಿ ಬಾಧ್ಯಸ್ಥನೇ..?- ಹೈಕೋರ್ಟ್ ತೀರ್ಪು

ಪತ್ನಿ ಮಾಲೀಕತ್ವದ ಸಂಸ್ಥೆಯ ಚೆಕ್ ಅಮಾನ್ಯಕ್ಕೆ ಪತಿ ಬಾಧ್ಯಸ್ಥನೇ..?- ಹೈಕೋರ್ಟ್ ತೀರ್ಪು





ತನ್ನ ಪತ್ನಿ ಮಾಲೀಕತ್ವದ ಸಂಸ್ಥೆ(Sole Trading Firm)ಯ ಚೆಕ್ ಅಮಾನ್ಯಕ್ಕೆ ಪತಿ ಬಾಧ್ಯಸ್ಥನಾಗುತ್ತಾರೆಯೇ.. ಎಂಬ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.


ತೀರ್ಪಿನ ವಿವರ:

ಏಕಮಾತ್ರ ವ್ಯವಹಾರ ಸಂಸ್ಥೆಯ ಮಾಲಕರಾಗಿರುವ ಪತ್ನಿ ನೀಡಿದ ಚೆಕ್‌ ಅಮಾನ್ಯಗೊಂಡರೆ ಪತಿಯನ್ನು ಬಾಧ್ಯಸ್ಥರನ್ನಾಗಿ ಮಾಡಲು ಆಗುವುದಿಲ್ಲ ಮತ್ತು ಸಮನ್ಸ್ ಜಾರಿಗೊಳಿಸಲಾಗದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಇಂತಹ ಪ್ರಕರಣದಲ್ಲಿ ಪತಿಯನ್ನು ಆರೋಪಿಯನ್ನಾಗಿ ಮಾಡಲಾಗದು ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿದೆ.


ನ್ಯಾ. ಉಮೇಶ್ ಚಂದ್ರ ಶರ್ಮಾ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.


ಏನಿದು ಪ್ರಕರಣ?:

ಪ್ರಕರಣದ ದೂರುದಾರರಾದ ಪವನ್ ಗಾರ್ಗ್‌ ಅವರು ಸಮನ್ಸ್ ಆದೇಶವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.


ಪತ್ನಿ ಮಾಲಕತ್ವದ ಸಂಸ್ಥೆ ನೀಡಿದ ಚೆಕ್‌ ಅಮಾನ್ಯಗೊಂಡರೆ NI Act ಅಡಿ ದಾಖಲಾಗುವ ಅಂತಹ ಪ್ರಕರಣದಲ್ಲಿ ಸಮನ್ಸ್ ನೀಡಲಾಗದು ಅಥವಾ ಪ್ರಕರಣದಲ್ಲಿ ಪತಿಯನ್ನು ಆರೋಪಿಯನ್ನಾಗಿ ಮಾಡಲಾಗದು. 


ಸದ್ರಿ ಪ್ರಕರಣದಲ್ಲಿ ಪತಿಗೂ ಸಂಸ್ಥೆಗೂ ಯಾವುದೇ ಸಂಬಂಧ ಯಾ ಒಪ್ಪಂದ ಇಲ್ಲ. ಸಂಸ್ಥೆಯ ಏಜೆಂಟ್ ಆಗಿರುವ ಬಗ್ಗೆ, ಸಂಸ್ಥೆಯನ್ನು ಪ್ರತಿನಿಧಿಸುವ ಬಗ್ಗೆಯಾಗಲೀ ಅಂತಹ ಯಾವುದೇ ದಾಖಲೆಯನ್ನು ಮಾನ್ಯ ನ್ಯಾಯಾಲಯದ ಮುಂದೆ ಸಲ್ಲಿಸಿಲ್ಲ ಎಂಬುದನ್ನು ಹೈಕೋರ್ಟ್ ನ್ಯಾಯಪೀಠ ಗಮನಿಸಿತು.



ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸದೆ ವಿಚಾರಣಾ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಹೊರಡಿಸಿರುವ ಸಮನ್ಸ್‌ನ್ನು ಹೈಕೋರ್ಟ್ ನ್ಯಾಯಪೀಠ ರದ್ದುಗೊಳಿಸಿತು.


ಪ್ರಕರಣ: ಪವನ್ ಗಾರ್ಗ್‌ Vs ಉ.ಪ್ರ ಸರ್ಕಾರ ಮತ್ತೊಬ್ಬರು

ಅಲಹಾಬಾದ್ ಹೈಕೋರ್ಟ್ Dated 18-04-2023



Ads on article

Advertise in articles 1

advertising articles 2

Advertise under the article