NI Act Sec 138 | ಚೆಕ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರ ಕೇಳಬಹುದೇ?- ಒರಿಸ್ಸಾ ಹೈಕೋರ್ಟ್ ತೀರ್ಪು
Saturday, April 8, 2023
NI Act Sec 138 | ಚೆಕ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರ ಕೇಳಬಹುದೇ?- ಒರಿಸ್ಸಾ ಹೈಕೋರ್ಟ್ ತೀರ್ಪು
ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್ ಮೊತ್ತದ ಜೊತೆಗೆ ಇತರ ವೆಚ್ಚವನ್ನು ಪರಿಹಾರವಾಗಿ ಕೇಳಿದ್ದಾರೆ ಎಂದ ಮಾತ್ರಕ್ಕೆ ಕಾನೂನು ಪ್ರಕ್ರಿಯೆ ಅಮಾನ್ಯವಾಗದು ಎಂದು ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚೆಕ್ ಅಮಾನ್ಯ ಪ್ರಕರಣದ ಲೀಗಲ್ ನೋಟೀಸ್ ನಲ್ಲಿ ಚೆಕ್ ಮೊತ್ತದ ಬೇಡಿಕೆಯ ಜೊತೆಗೆ ಕೆಲವು ಇತರ ವೆಚ್ಚಗಳ ಪರಿಹಾರ ಕೇಳಿದರು ಎಂಬ ಕಾರಣದಿಂದ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿನ ವಿಚಾರಣೆಯನ್ನು ರದ್ದು ಮಾಡಬೇಕು ಎಂದು ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾ. ರಾಧಾಕೃಷ್ಣ ಪಟ್ಟನಾಯಕ್ ನೇತೃತ್ವದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
"...ಕೆ.ಆರ್. ಇಂದಿರಾ (ಸುಪ್ರಾ) ಪ್ರಕರಣದಲ್ಲಿ ನೆಲೆಗೊಂಡಿರುವ ಕಾನೂನು ಸ್ಥಾನದ ದೃಷ್ಟಿಯಿಂದ ಈ ತೀರ್ಪು ನೀಡಲಾಗಿದೆ.
ಸದರಿ ಪ್ರಕರಣದಲ್ಲಿ ನೀಡಲಾಗಿದ್ದ
ಲೀಗಲ್ ನೋಟೀಸ್‌ನಲ್ಲಿ ವಿವಿಧ ವೆಚ್ಚಗಳನ್ನು ಸೇರಿಸಿ ಚೆಕ್ ಮೊತ್ತಕ್ಕೆ ಬೇಡಿಕೆ ಜೊತೆಗೆ ಹೆಚ್ಚುವರಿ ಮೊತ್ತದ ಪರಿಹಾರ ಕೋರಿ ಫಿರ್ಯಾದಿ ಸಲ್ಲಿಸಲಾಗಿತ್ತು. ಆದರೆ, ಈ ಏಕೈಕ ಕಾರಣಕ್ಕೆ ದೂರಿನ ವಿಚಾರಣೆಯನ್ನು ಅಮಾನ್ಯಗೊಳಿಸುವುದಿಲ್ಲ…” ಎಂದು ನ್ಯಾಯಪೀಠ ಹೇಳಿತು..
ಸದರಿ ಪ್ರಕರಣದಲ್ಲಿ, ಅರ್ಜಿದಾರರ ರೂ. 14,00,000/-ಗಳ ಮೂರು ಚೆಕ್‌ಗಳನ್ನು ಪ್ರತಿವಾದಿಯವರು ಬ್ಯಾಂಕಿಗೆ ಹಾಜರುಪಡಿಸಿದಾಗ, ನಿಧಿಯ ಕೊರತೆಯಿಂದಾಗಿ ಎಲ್ಲ ಚೆಕ್ ಅಮಾನ್ಯಗೊಂಡಿತ್ತು.
ಆದ್ದರಿಂದ, ಎದುರುದಾರರು ಅರ್ಜಿದಾರರಿಗೆ ಚೆಕ್ ಮೊತ್ತವನ್ನು ಪಾವತಿಸಲು ಮತ್ತು ಕಾನೂನು ಕ್ರಮದ ಸಂದರ್ಭದಲ್ಲಿ, ಪ್ರಕ್ರಿಯೆಯ ಸಂಪೂರ್ಣ ವೆಚ್ಚವನ್ನು, ಕಾನೂನು ಶುಲ್ಕದ ಜೊತೆಗೆ ಚೆಕ್ ಮೊತ್ತದ ಮೇಲಿನ ಖರ್ಚು ಭರಿಸುವಂತೆ ಕಾನೂನು ನೋಟಿಸ್ ನೀಡಿತು.
ನೋಟಿಸ್ ನೀಡಿದರೂ ಆರೋಪಿಯು ಹಣ ಪಾವತಿಸದ ಕಾರಣ ಎನ್.ಐ. ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಆದಾಗ್ಯೂ, ಅರ್ಜಿದಾರರು ಚೆಕ್‌ಗಳ ಅಮಾನ್ಯಕ್ಕೆ ಚೆಕ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಕ್ಲೈಮ್ ಮಾಡಿದ್ದರಿಂದ ನೋಟಿಸ್ ದೋಷಪೂರಿತವಾಗಿದೆ. ಹಾಗಾಗಿ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್‌ನ ನಿರ್ಧಾರಗಳನ್ನು ಅವಲಂಬಿಸಿ, ಅರ್ಜಿದಾರರು ನೋಟಿಸ್‌ನಲ್ಲಿನ ಚೆಕ್ ಅಮಾನ್ಯಗೊಂಡ ಮೊತ್ತಕ್ಕಿಂತ ಹೆಚ್ಚಿನದನ್ನು ಕೇಳಲು ಬರುವುದಿಲ್ಲ. ಈ ಅಂತಹ ನೋಟೀಸ್ ಆಧರಿಸಿ ಕಾನೂನು ಕ್ರಮ ಜರುಗಿಸಲಾಗದು ಎಂದು ವಾದಿಸಿದ್ದರು.