ಮೇಲ್ಮನವಿ ಹಂತದಲ್ಲಿ ಹೆಚ್ಚುವರಿ ಸಾಕ್ಷ್ಯ ಒಗಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಮೇಲ್ಮನವಿ ಹಂತದಲ್ಲಿ ಹೆಚ್ಚುವರಿ ಸಾಕ್ಷ್ಯ ಒಗಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಯಾವುದೇ ವ್ಯಾಜ್ಯದ ಪಕ್ಷಕಾರರು ಮೇಲ್ಮನವಿ ಹಂತದಲ್ಲಿ ಮೌಖಿಕ ಯಾ ದಾಖಲೆಗಳ ಸಾಕ್ಷಿ ಸೇರಿದಂತೆ ಹೆಚ್ಚುವರಿ ಸಾಕ್ಷ್ಯವನ್ನು ಒಗಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣವೊಂದರ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ರಾಜೇಶ್ ರೈ ಕಲ್ಲಂಗಳ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಆಂಡಿಸ್ವಾಮಿ ಚೆಟ್ಟಿಯಾರ್ Vs ಸುಬ್ಬರಾಜ್ ಚೆಟ್ಟಿಯಾರ್ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ದಿವಾಣಿ ಪ್ರಕ್ರಿಯಾ ಸಂಹಿತೆಯ ಆದೇಶ XLI ನಿಯಮ 27ರ ಪ್ರಕಾರ ಮೂರು ಪರಿಸ್ಥಿತಿಗಳಲ್ಲಿ ಮಾತ್ರ ಹೆಚ್ಚುವರಿ ಸಾಕ್ಷ್ಯ ಒದಗಿಸಬಹುದು ಎಂದು ಹೇಳಿದೆ.
ಪ್ರಕರಣದ ಅರ್ಹತೆಯಲ್ಲೇ ದೋಷ ಉಂಟಾದರೆ ಅದನ್ನು ಕಾನೂನು ಪ್ರಕಾರ ಪ್ರಶ್ನಿಸುವ ಮುಕ್ತ ಅವಕಾಶ ಎದುರುವಾದಿಗೆ ಇದ್ದೇ ಇರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಇತ್ಯರ್ಥದ ಪ್ರಾಥಮಿಕ ಹಂತದಲ್ಲಿ ಪ್ರತಿವಾದಿಗಳು ಹೆಚ್ಚುವರಿ ಸಾಕ್ಷ್ಯ ಒದಗಿಸಲು ಕೋರಿ ಯಾವುದೇ ಅರ್ಜಿಯನ್ನು ಹಾಕಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.
.