ಕೇಂದ್ರ ಸರ್ಕಾರದಿಂದ ಸಿಬಿಐ ದುರುಪಯೋಗ ಆರೋಪ: 14 ಪ್ರತಿಪಕ್ಷಗಳ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ಕೇಂದ್ರ ಸರ್ಕಾರದಿಂದ ಸಿಬಿಐ ದುರುಪಯೋಗ ಆರೋಪ: 14 ಪ್ರತಿಪಕ್ಷಗಳ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ರಾಜಕಾರಣಿಗಳಿಗೆ ವಿಶೇಷವಾದ ಆದ್ಯತೆಯನ್ನು ನೀಡಲಾಗದು. ಅವರೂ ಸಾಮಾನ್ಯ ನಾಗರಿಕರಂತೆ ಒಂದೇ ತೆರನಾದ ಪ್ರತಿರಕ್ಷೆಯನ್ನು ಪಡೆಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಿಬಿಐ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ 14 ಪ್ರತಿಪಕ್ಷಗಳು ಹಾಕಿರುವ ಅರ್ಜಿಯನ್ನು ತನಿಖೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಕಾನೂನಿನ ದೃಷ್ಟಿಯಿಂದ ರಾಜಕೀಯ ನಾಯಕರೂ ಒಂದೇ.. ಹೆಚ್ಚು ವಿನಾಯಿತಿ ಇಲ್ಲದ ಸಾಮಾನ್ಯ ನಾಗರಿಕರೂ ಒಂದೇ. ಇದನ್ನು ನ್ಯಾಯಾಲಯ ಒಪ್ಪಿಕೊಂಡಾಗಿದೆ ಎಂದು ನ್ಯಾಯಪೀಠ ಹೇಳಿದೆ.
ರಾಜಕಾರಣಿಗಳು ಸಾಮಾನ್ಯ ನಾಗರಿಕರಿಗೂ ಹೆಚ್ಚಿನದಾದ ಹಿತಭಾವ ಪಡೆಯುವ
ಇಂತಹ ಸಂದರ್ಭದಲ್ಲಿ ಮೂರು ಹಂತದ ಪರೀಕ್ಷೆ ತೃಪ್ತಿಕರವಾಗದಿದ್ದರೆ ಬಂದಿಸುವಂತಿಲ್ಲ ಎಂದು ನಾವು ಹೇಗೆ ಹೇಳಲು ಸಾಧ್ಯ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತು.
ಪ್ರಕರಣ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ ಒಕ್ಕೂಟ
ಸುಪ್ರೀಂ ಕೋರ್ಟ್