ಮೇ1ರಿಂದ SMS, ನಕಲಿ ಕರೆಗೆ ಬ್ರೇಕ್: ಮೊಬೈಲ್ ಗ್ರಾಹಕರು ನಿರಾಳ
ಮೇ1ರಿಂದ SMS, ನಕಲಿ ಕರೆಗೆ ಬ್ರೇಕ್: ಮೊಬೈಲ್ ಗ್ರಾಹಕರು ನಿರಾಳ
ಇನ್ನು ಮುಂದೆ ಮೊಬೈಲ್ ಗ್ರಾಹಕರಿಗೆ ನಕಲಿ ಕರೆಗಳು, ಫೇಕ್ ಮೆಸ್ಸೇಜ್‌ಗಳ ಚಿಂತೆ ಇಲ್ಲ. OTP ಕೊಡಿ ಎಂದೋ ಗಿಫ್ಟ್ ಬಂದಿದೆ ಎಂದೋ ಆಧಾರ್ ಪಾನ್ ಲಿಂಕ್ ಮಾಡುತ್ತೇವೆ ಎಂದೋ ಬರುವ ಕರೆಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಮೇ 1ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಗ್ರಾಹಕರಿಗೆ ಕಿರಿಕಿರಿ ಆಗುವ ಕರೆ ಮತ್ತು ಸಂದೇಶವನ್ನು ತಡೆಯಲು ಎಲ್ಲ ಕಂಪೆನಿಗಳು ಕೃತಕ ಬುದ್ದಿಮತ್ತೆ ಆಧಾರಿತ ಸ್ಪ್ಯಾಮ್ ಫಿಲ್ಟರ್‌ನ್ನು ಬಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ನಿಯಮ ಪಾಲಿಸದ ಟೆಲಿಕಾಂ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಾಯ್ ಎಚ್ಚರಿಕೆ ನೀಡಿದೆ.
ಟ್ರಾಯ್ ನಿಯಮದ ಪ್ರಕಾರ, ಟೆಲಿಕಾಂ ಕಂಪೆನಿಗಳು ಟೆಲಿ ಮಾರ್ಕೆಟರ್‌ಗಳಿಗೆ ವಿಶೇಷ ಸಂಖ್ಯೆಯನ್ನು ನೀಡುತ್ತಿದ್ದು, ಅದರಲ್ಲೇ ಕರೆ ಯಾ SMS ಮಾಡಬೇಕು. ನೋಂದಣಿಯಾಗದ ಸಂಖ್ಯೆಗಳಿಂದ ಬರುವ ಕರೆ ಮತ್ತು SMSಗಳನ್ನು ನಿರ್ಬಂಧಿಸಲು ಕಂಪೆನಿಗಳು ಕ್ರಮ ಕೈಗೊಳ್ಳಬೇಕು.
ಇದರಿಂದ ಬ್ಯಾಂಕ್, ವಿಮಾ ಕಂಪೆನಿ ಹೆಸರಲ್ಲಿ ವಂಚಕರು ಮಾಡುವ ಕರೆಗಳಿಗೆ ಬ್ರೇಕ್ ಬೀಳಲಿದೆ. ಅಧಿಕೃತ ಕರೆಗಳಿಗೂ ನಿರ್ದಿಷ್ಟ ಮಿತಿಯನ್ನು ಅಳವಪಡಿಸಿದ್ದು, ಮೂರು ಕರೆ ಯಾ ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಧ್ವನಿ ಆಧಾರಿದ ಟೆಲಿ ಮಾರ್ಕೆಟಿಂಗ್‌ಗಳನ್ನು ಒಂದೇ ವೇದಿಕೆಯಲ್ಲಿ ತಂದು ಗ್ರಾಹಕರಿಗೆ ಆಗುವ ಅನಗತ್ಯ ಕಿರಿಕಿರಿಗೆ ಬ್ರೇಕ್ ಹಾಕಲಿದೆ.
ಹಣದ ವಹಿವಾಟು ಯಾ ನೋಟಿಫಿಕೇಶನ್‌ಗಳಿಗೆ ಸಂಬಂಧಿಸಿದ ವಾಯ್ಸ್ ಕಾಲ್‌ಗಳನ್ನು ಕಳಿಸಲು ಟೆಲಿಕಾಂ ಕಂಪೆನಿಗಳು ಹೊಸ ಸರಣಿಯ ನಂಬರ್‌ಗಳನ್ನು ನೀಡಲಿದೆ. ಈ ಎಲ್ಲ ಕ್ರಮಗಳಿಂದ ಮೊಬೈಲ್ ಗ್ರಾಹಕರು ನಿರಾಳರಾಗಲಿದ್ದಾರೆ.
.