ಬೆಳೆ ವಿಮೆ ವಂಚನೆ: ರೈತರ ಲಕ್ಷಗಟ್ಟಲೆ ಹಣ ನುಂಗಿ ನೀರು ಕುಡಿದ ನಿವೃತ್ತ ತಹಶೀಲ್ದಾರ್ ವಿರುದ್ಧ FIR !
ಬೆಳೆ ವಿಮೆ ವಂಚನೆ: ರೈತರ ಲಕ್ಷಗಟ್ಟಲೆ ಹಣ ನುಂಗಿ ನೀರು ಕುಡಿದ ನಿವೃತ್ತ ತಹಶೀಲ್ದಾರ್ ವಿರುದ್ಧ FIR !
ಸುಮಾರು 6000 ರೈತರಿಗೆ ನೀಡಬೇಕಿದ್ದ ಬೆಳೆ ವಿಮೆಯ ಪರಿಹಾರವನ್ನು ಅಧಿಕಾರಿಗಳು ತಮ್ಮ ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿರುವ ಪ್ರಕರಣ ಚಳ್ಳಕೆರೆಯಲ್ಲಿ ಬಯಲಾಗಿದೆ.
ಚಳ್ಳಕೆರೆಯಲ್ಲಿ ಈ ಬೃಹತ್ ಹಗರಣ ಬಯಲಾಗಿದ್ದು, ತಾಲೂಕು ಕಚೇರಿ ಶಿರಸ್ತೇದಾರರಾದ ಸದಾಶಿಪ್ಪ ಅವರ ದೂರಿನ ಮೇಲೆ ಚಳ್ಳಕೆರೆ ಪೊಲೀಸರು ಈ ದೂರು ದಾಖಲಿಸಿಕೊಂಡಿದ್ದಾರೆ.
ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಈ ಪ್ರಕರಣದ ಪ್ರಮುಖ ಆರೋಪಿ ಎಂದು ದೂರಲಾಗಿದೆ.
ರೈತರ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಈ ಹಗರಣದ ತನಿಖೆ ನಡೆಸಿದ್ದರು. ಸುಮಾರು 20.49 ಲಕ್ಷ ರೂಪಾಯಿಗಳಷ್ಟು ಬೆಳೆ ನಷ್ಟ ಪರಿಹಾರದ ಹಣವನ್ನು ಈ ರೀತಿಯಾಗಿ ವಂಚಿಸಿದ ಪ್ರಕರಣ ಇದಾಗಿದೆ.
ಸುಳ್ಳು ದಾಖಲೆ ಸೃಷ್ಟಿಸಿ ನೈಜ ಎಂಬಂತೆ ಈ ಅಕ್ರಮ ವ್ಯವಹಾರವನ್ನು ಬಿಂಬಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಈ ವಿಷಯ ಖಚಿತವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಸೂಚನೆಯಂತೆ ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ವಿರುದ್ಧ ದೂರು ದಾಖಲಾಗಿದೆ. ಚಳ್ಳಕೆರೆ ಪೊಲೀಸರು FIR ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಕಾಲುವೆಹಳ್ಳಿ ಗ್ರಾಮ ಲೆಕ್ಕಿಗ ಸಿರಾಜ್, ಜಾಜೂರು ಗ್ರಾಮ ಲೆಕ್ಕಿಗ ಮಮ್ತಾಜ್ ಉನ್ನೀಸ್, ಕಂಪ್ಯೂಟರ್ ಆಪರೇಟರ್ ರಾಘವೇಂದ್ರ, ಮೇಘನಾ ಮತ್ತು ಸಂಜೀವ ಮೂರ್ತಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಎನ್. ರಘುಮೂರ್ತಿ ತಹಶೀಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದರು ಎಂದು ಹೇಳಲಾಗಿದೆ.
.