ಪೋಕ್ಸೊ ಆರೋಪಿಯ ಖುಲಾಸೆ: ಮಂಗಳೂರು ಹೆಚ್ಚುವರಿ ವಿಶೇಷ ನ್ಯಾಯಾಲಯದ ಆದೇಶ
ಪೋಕ್ಸೊ ಆರೋಪಿಯ ಖುಲಾಸೆ: ಮಂಗಳೂರು ಹೆಚ್ಚುವರಿ ವಿಶೇಷ ನ್ಯಾಯಾಲಯದ ಆದೇಶ
2022ರ ಅಕ್ಟೋಬರ್
ನಲ್ಲಿ ಮಂಗಳೂರಿನ ಕೋಡಿಕಲ್ ವ್ಯಾಯಾಮ ಶಾಲೆಯ ಬಳಿ ನಡೆದಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪಿ ವೀರೇಶ್ ಆಲಿಯಾಸ್ ಭದ್ರಪ್ಪ ಎಂಬಾತನನ್ನು ಆರೋಪ ಮುಕ್ತಗೊಳಿಸಿ ಮಂಗಳೂರು ನ್ಯಾಯಾಲಯ ಆದೇಶ ನೀಡಿದೆ.
ಮಂಗಳೂರಿನ
ಎರಡನೇ ವಿಶೇಷ ಪೋಕ್ಸೊ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಮಾನ್ಯ ಕೆ.ಎಂ.
ರಾಧಾಕೃಷ್ಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಮಂಗಳೂರಿನ
ಕೋಡಿಕಲ್ ಎಂಬಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ವೀರೇಶ್ ತನ್ನ ನೆರಮನೆಯ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ
ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಆರೋಪಿ 30
ವರ್ಷ ಪ್ರಾಯದ ವೀರೇಶ ಎಂಬಾತ ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದು ತನಿಖೆ
ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂಬುದಾಗಿ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ
ಸಲ್ಲಿಸಿದ್ದರು.
ಅಭಿಯೋಜನೆಯ
ಪರವಾಗಿ ಏಳು ಮಂದಿ ಸಾಕ್ಷಿಗಳನ್ನು ಹಾಜರುಪಡಿಸಿ ಸಾಕ್ಷ್ಯವನ್ನು ದಾಖಲಿಸಿಕೊಳ್ಳಲಾಗಿತ್ತು. ಪ್ರಾಸಿಕ್ಯೂಷನ್
ಪರವಾಗಿ ವೈದ್ಯಕೀಯ ಪರೀಕ್ಷಾ ವರದಿ ಸೇರಿದಂತೆ ಏಳು ಸಾಕ್ಷ್ಯಗಳನ್ನು ನಿಶಾನೆಯಾಗಿ ಗುರುತಿಸಲಾಗಿತ್ತು.
ಆದರೆ, ಪ್ರಾಸಿಕ್ಯೂಷನ್
ಪರ ದಾಖಲೆಗಳನ್ನು ಹಾಜರುಪಡಿಸಿದ್ದರೂ ಮೌಖಿಕ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ, ಅಭಿಯೋಜನೆಯು
ಅಪರಾಧವನ್ನು ಸಾಬೀತುಮಾಡಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಯನ್ನು ಖುಲಾಸೆಗೊಳಿಸಿತು.
ಆರೋಪಿಯ ಪರವಾಗಿ
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ದಿನೇಶ್ ಶೆಟ್ಟಿ ಅವರು ವಾದಿಸಿದ್ದರು.