-->
ನಕಲಿ ವಕೀಲರಿಗೆ ಸಂಕಷ್ಟ!- ವಕೀಲರ ಪದವಿ ಪರಿಶೀಲನೆಗೆ ಸುಪ್ರೀಂ ಸಮಿತಿ ರಚನೆ

ನಕಲಿ ವಕೀಲರಿಗೆ ಸಂಕಷ್ಟ!- ವಕೀಲರ ಪದವಿ ಪರಿಶೀಲನೆಗೆ ಸುಪ್ರೀಂ ಸಮಿತಿ ರಚನೆ

ನಕಲಿ ವಕೀಲರಿಗೆ ಸಂಕಷ್ಟ!- ವಕೀಲರ ಪದವಿ ಪರಿಶೀಲನೆಗೆ ಸುಪ್ರೀಂ ಸಮಿತಿ ರಚನೆ





ಮಹತ್ವದ ಬೆಳವಣಿಗೆಯೊಂದರಲ್ಲಿ ನಕಲಿ ವಕೀಲರ ಹಾವಳಿ ತಡೆಗಟ್ಟಲು ಸ್ವತಃ ಸುಪ್ರೀಂ ಕೋರ್ಟ್ ಮುಂದಾಗಿದೆ. ವಕೀಲರ ಪದವಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.



ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಯೋಗ್ಯರೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.



ಒಂದು ವೇಳೆ ನಿರ್ದಿಷ್ಟ ವಕೀಲರು ಅರ್ಹತೆ ಪಡೆದುಕೊಂಡಿಲ್ಲ ಎಂದು ಕಂಡುಬಂದರೆ ಅಂಥವರನ್ನು ಉನ್ನತಾಧಿಕಾರದ ಸಮಿತಿಯ ತನಿಖೆ ನಂತರ ನ್ಯಾಯವ್ಯವಸ್ಥೆಯಿಂದ ಹೊರಗಿಡಲಿದೆ.



ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ನೇತೃತ್ವದ ನ್ಯಾಯಪೀಠ ಈ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ



ವಕೀಲರ ಪದವಿ ಪರಿಶೀಲನೆ ಪ್ರಕ್ರಿಯೆಯಲ್ಲಿನ ಅಡೆತಡೆಗಳನ್ನು ಗಮನಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.



Ads on article

Advertise in articles 1

advertising articles 2

Advertise under the article