2000 ರೂ. ನೋಟಿಗೆ ನಿರ್ಬಂಧ: ಸೆಪ್ಟೆಂಬರ್ ಬಳಿಕ ಈ ನೋಟು ಚಲಾವಣೆಯಾಗದು!
Friday, May 19, 2023
2000 ರೂ. ನೋಟಿಗೆ ನಿರ್ಬಂಧ: ಸೆಪ್ಟೆಂಬರ್ ಬಳಿಕ ಈ ನೋಟು ಚಲಾವಣೆಯಾಗದು!
2016ರ ನವೆಂಬರ್ ನಲ್ಲಿ ನೋಟು ಅಮಾನ್ಯೀಕರಣದ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದು, 2000 ನೋಟಿಗೆ ನಿರ್ಬಂಧ ಹೇರಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ನಿರ್ಬಂಧ ಜಾರಿಗೆ ಬರಲಿದ್ದು, ಸೆಪ್ಟೆಂಬರ್ ಬಳಿಕ ಈ ನೋಟು ಮಾನ್ಯತೆ ಕಳೆದುಕೊಳ್ಳಲಿದೆ.
ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದು, ಈ ಕರೆನ್ಸಿ ನೋಟನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದೆ.
2000 ಮುಖ ಬೆಲೆಯ ನೋಟುಗಳನ್ನು ಬ್ಯಾಂಕಿಗೆ ವಾಪಸ್ ನೀಡುವಂತೆ ಎಲ್ಲ ಪ್ರಮುಖ ಬ್ಯಾಂಕ್‌ಗಳಿಗೆ ಸುತ್ತೋಲೆ ಸೂಚನೆ ನೀಡಿದೆ.
ಸೆಪ್ಟೆಂಬರ್ 30, 2023ರ ವರೆಗೆ ವಾಪಸ್ ಪಡೆಯುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದು ತಮ್ಮಲ್ಲಿ ಇರುವ 2000 ಮುಖ ಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.