8 ಬ್ಯಾಂಕ್‌ಗಳ ಗ್ರಾಹಕರಿಗೆ ಶಾಕ್!- ಲೈಸನ್ಸ್ ರದ್ದುಪಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್
8 ಬ್ಯಾಂಕ್‌ಗಳ ಗ್ರಾಹಕರಿಗೆ ಶಾಕ್!- ಲೈಸನ್ಸ್ ರದ್ದುಪಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್
ಎಂಟು ಬ್ಯಾಂಕ್‌ಗಳ ಲೈಸನ್ಸ್ ರದ್ದು ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ.
2022 - 23ರ ಆರ್ಥಿಕ ವರ್ಷದಲ್ಲಿ ಆರ್‌ಬಿಐ ನಿಯಮಗಳನ್ನು ಪಾಲನೆ ಮಾಡದ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಿಗೆಗಳನ್ನು ರದ್ದು ಮಾಡಲಾಗಿದೆ. ಇಷ್ಟೇ ಅಲ್ಲ, RBI ನಿಯಮಗಳನ್ನು ಪಾಲಿಸದ ಕೆಲವು ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಿದೆ.
RBI 114 ಬಾರಿ ದಂಡ ವಿಧಿಸಿದ ಬ್ಯಾಂಕ್‌ಗಳ ಪಟ್ಟಿ:
2022 - 23ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಲೈಸನ್ಸ್ ರದ್ದು ಮಾಡಲಾಘಿದೆ. ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಲಾಘಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಿರುವ ಹೆಗ್ಗಳಿಕೆಗೆ ಸಹಕಾರಿ ಬ್ಯಾಂಕ್‌ಗಳು ಪಾತ್ರವಾಗಿವೆ. ಆದರೆ, ಅದೇ ರೀತಿ ಈ ಬ್ಯಾಂಕ್‌ಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ನಿರ್ಲಕ್ಷ್ಯ ತೋರಿದ ಆರೋಪ:
ಸಹಕಾರಿ ಬ್ಯಾಂಕ್‌ಗಳು ದ್ವಂದ್ವ ನಿಲುವು, ಸಡಿಲ ನಿಯಮ, ಹಾಗೂ ಅಸ್ಥಿರ ದುರ್ಬಲ ಹಣಕಾಸು ನೀತಿ ಅನುಸರಿಸುತ್ತಿತ್ತು. ಸ್ಥಳೀಯ ಮುಖಂಡರು ಈ ಸಹಕಾರಿ ಬ್ಯಾಂಕ್‌ಗಳ ವ್ಯವಹಾರದಲ್ಲಿ ಮೂಗು ತೂರಿಸುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಈ ಕಾರಣಕ್ಕೆ ಎಂಟು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಪಡಿಸಿದ್ದು, ಆ ಬ್ಯಾಂಕ್‌ಗಳ ವಿವಿರ ಇಲ್ಲಿದೆ.
1. ಮುಧೋಳ್ ಸಹಕಾರಿ ಬ್ಯಾಂಕ್
2. ಮಿಲ್ಲತ್ ಸಹಕಾರಿ ಬ್ಯಾಂಕ್
3. ಶ್ರೀ ಆನಂದ ಕೋ ಅಪರೇಟಿವ್ ಬ್ಯಾಂಕ್
4. ರೂಪಾಯಿ ಕೋ ಅಪರೇಟಿವ್ ಬ್ಯಾಂಕ್
5. ಡೆಕ್ಕನ್ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್
6. ಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕ್
7. ಸೇವಾ ವಿಕಾಸ್ ಕೋ ಆಪರೇಟಿವ್ ಬ್ಯಾಂಕ್
8. ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್
ಸಾಕಷ್ಟು ಬಂಡವಾಳದ ಕೊರತೆ, ಬ್ಯಾಂಕಿಂಗ್ ನಿಯಂತ್ರಣದ ನಿಯಮಗಳನ್ನು ಪಾಲಿಸದೆ ಇರುವದೂ ಬ್ಯಾಂಕ್‌ಗಳ ಲೈಸನ್ಸ್ ರದ್ದಿಗೆ ಕಾರಣ. ಭವಿಷ್ಯದಲ್ಲಿ ಈ ಬ್ಯಾಂಕ್‌ಗಳ ತಮ್ಮ ಗಳಿಕೆಯ ಸಾಧ್ಯತೆ ಕೂಡಾ ಕ್ಷೀಣವಾಗಿರುವುದು ಮನದಟ್ಟಾದ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ.
.