ಬೈಬೈ ಬಿಜೆಪಿ – ಟ್ರೆಂಡ್ ಆದ ಹ್ಯಾಶ್ ಟ್ಯಾಗ್ : ಮತದಾನಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು!
ಬೈಬೈ ಬಿಜೆಪಿ – ಟ್ರೆಂಡ್ ಆದ ಹ್ಯಾಶ್ ಟ್ಯಾಗ್
: ಮತದಾನಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು!
ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ
ಇವೆ ಎನ್ನುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೈ ಬೈ ಬಿಜೆಪಿ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್
ಆಗಿದೆ. ಈ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಗೆ ಎದಿರೇಟು ನೀಡಿದೆ.
ಮಂಗಳವಾರ #ByeByeBJP ಎನ್ನುವ ಹ್ಯಾಷ್ ಟ್ಯಾಗ್
ಬಳಸಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಟ್ವಿಟ್ಟರ್ ಅಭಿಯಾನ ನಡೆಸಿದ್ಧಾರೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರುವ ಚಿತ್ರ, ವ್ಯಂಗ್ಯ
ಚಿತ್ರ, ಮಾಧ್ಯಮ ವರದಿ ಹಾಗೂ ಬರಹಗಳನ್ನು ಟ್ವೀಟ್ ಮಾಡಿದ ಪೋಸ್ಟ್ ಗಳು ಭಾರೀ ಸದ್ದು ಮಾಡುತ್ತಿದೆ.
ಬಿಜೆಪಿ ನಾಯಕರ ದ್ವೇಷ ಭಾಷಣ, ಕೋಮು ಗಲಭೆ,
ನಂದಿನಿ ವಿವಾದ, ಪೇಸಿಎಂ, ರಸ್ತೆ ಗುಂಡಿ, ಹಿಜಬ್ ವಿವಾದ, ನಿರುದ್ಯೋಗ, ಶೇಕಡಾ 40 ಪರ್ಸೆಂಟ್ ಕಮಿಷನ್
ಮುಂತಾದ ವಿಷಯಗಳು ಜನರನ್ನು ರಂಜಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶೇಕಡಾ 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ
ನನ್ನ ಮತ ಇಲ್ಲ ಎನ್ನುವ ಪೋಸ್ಟರ್ ಹಿಡಿದಿರುವ ಜನರ ವೀಡಿಯೋ ದೊಡ್ಡ ಪ್ರಮಾಣದಲ್ಲಿ ಹರಿದಾಡುತ್ತಿದೆ.
ರಾಜ್ಯ ಕಾಂಗ್ರೆಸ್ ಘಟಕ, ಭಾರತೀಯ ಯುವ ಕಾಂಗ್ರೆಸ್, ಜಾನ್ಸಿ ಕಾಂಗ್ರೆಸ್ ಸೇವಾದಳ, ದೇಶದ ಕಾಂಗ್ರೆಸ್ ನಾಯಕರು, ವಕ್ತಾರರು ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೈಬೈ ಬಿಜೆಪಿ – ಟ್ರೆಂಡ್ ಆದ ಹ್ಯಾಶ್ ಟ್ಯಾಗ್