ಮಕಾಡೆ ಮಲಗಿದ ಬಿಎಸ್ಎನ್ಎಲ್: ಮೊಬೈಲ್ ಕರೆ, ನೆಟ್ ವರ್ಕ್ ಇಲ್ಲದೆ ಪರದಾಡಿ ಹಿಡಿಶಾಪ ಹಾಕಿದ ಗ್ರಾಹಕರು
ಮಕಾಡೆ ಮಲಗಿದ ಬಿಎಸ್ಎನ್ಎಲ್: ಮೊಬೈಲ್ ಕರೆ, ನೆಟ್ ವರ್ಕ್ ಇಲ್ಲದೆ ಪರದಾಡಿ ಹಿಡಿಶಾಪ ಹಾಕಿದ ಗ್ರಾಹಕರು
ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತೊಮ್ಮೆ
ತನ್ನ ಕಳಪೆ ಸೇವೆಗೆ ಗ್ರಾಹಕರಿಂದ ಹಿಡಿಶಾಪ ಹಾಕಿಸಿಕೊಂಡಿದೆ.
ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದ
ವರೆಗೆ ಕರಾವಳಿ ಭಾಗದ ಬಹುತೇಕ ಎಲ್ಲ ಬಿಎಸ್ಎನ್ಎಲ್ ಸಿಮ್ ನಿಂದ ಕರೆ ಸೌಲಭ್ಯ ಸ್ಥಗಿತಗೊಂಡಿತ್ತು.
ಇಂಟರ್ ನೆಟ್ ಬಳಕೆ ಮಾಡಲಾಗದೆ ಮತ್ತು ಮೊಬೈಲ್ ಕರೆ ಮಾಡಲಾಗದೆ ಗ್ರಾಹಕರು ಪರದಾಡಿದರು.
ಮೊಬೈಲ್ ಫೋನ್ ಇದ್ದರೂ ಈ ತಂತ್ರಜ್ಞಾನದ ಜಗತ್ತಿನಲ್ಲಿ
ಒಬ್ಬರನ್ನು ಸಂಪರ್ಕ ಮಾಡಲೂ ಸಾಧ್ಯವಾಗದೆ ಜನ ಸಂಕಷ್ಟ, ಯಾತನೆ ಪಟ್ಟರು. ಬಿಎಸ್ಎನ್ಎಲ್ ಕಂಪೆನಿಯ ಸೇವೆಗೆ
ಹಿಡಿಶಾಪ ಹಾಕಿದರು.
ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಕಳಪೆ
ಸೇವೆಗೆ ಕುಖ್ಯಾತಿ ಪಡೆದಿರುವುದು ಇದೇ ಮೊದಲಲ್ಲ. ಹಲವು ಬಾರಿ ಇಂತಹ ಘಟನೆಗಳು ಎದುರಾದರೂ ಸಿಬ್ಬಂದಿ
ಮಾತ್ರ ಏನೂ ಆಗದಂತೆ ಆರಾಮವಾಗಿ ಸರ್ಕಾರಿ ಸಂಬಳ ಪಡೆದುಕೊಂಡು ಹಾಯಾಗಿದ್ದಾರೆ.
ಸಂಸ್ಥೆಯ ಈ ಪ್ರವೃತ್ತಿಯಿಂದಾಗಿಯೇ ಕಂಪೆನಿ
ನಷ್ಟ ಅನುಭವಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಇತರ ಖಾಸಗಿ ಮೊಬೈಲ್ ನೆಟ್ ವರ್ಕ್ ಗೆ ಪೋರ್ಟ್
ಆಗುತ್ತಿದ್ದಾರೆ. ದೇಶ ಕಟ್ಟುವ, ದೇಶಕ್ಕೆ ಸೇವೆ ಮಾಡುವ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಇಂತಹ ದುಸ್ಥಿತಿ
ಇನ್ನಾದರೂ ಸುಧಾರಿಸಬೇಕಾಗಿದೆ.