ಆಪರೇಷನ್ ಚೀತಾದ ಮೂರನೇ ದುರಂತ: ಆಫ್ರಿಕಾದಿಂದ ತರಲಾಗಿದ್ದ ಹೆಣ್ಣು ಚಿರತೆ ಸಾವು...!
Tuesday, May 9, 2023
ಆಪರೇಷನ್ ಚೀತಾದ ಮೂರನೇ ದುರಂತ: ಆಫ್ರಿಕಾದಿಂದ ತರಲಾಗಿದ್ದ ಹೆಣ್ಣು ಚಿರತೆ ಸಾವು...!
ಆಪರೇಷನ್ ಚೀತಾ ಹೆಸರಲ್ಲಿ ದಕ್ಷಿಣ ಆಫ್ರಿಕಾದಿಂದ 20 ಚಿರತೆಗಳನ್ನು ತರಲಾಗಿತ್ತು. ಈ ಪೈಕಿ ದಕ್ಷಾ ಎಂಬ ಹೆಸರಿನ ಹೆಣ್ಣು ಚಿರತೆ ಮೃತಪಟ್ಟಿದೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಘಟನೆಯಲ್ಲಿ ದಕ್ಷಾ ಹೆಣ್ಣು ಚೀತಾ ಸಾವನ್ನಪ್ಪಿದೆ.
ದಕ್ಷಿಣಾ ಆಫ್ರಿಕಾದಿಂದ ತರಲಾಗಿದ್ದ 20 ಚಿರತೆಗಳ ಪೈಕಿ ಸಾವನ್ನಪ್ಪಿದ ಮೂರನೇ ಚಿರತೆ ಇದಾಗಿದೆ.
ಅಗ್ನಿ ಮತ್ತು ವಾಯು ಎಂಬ ಎರಡು ಗಂಡು ಚಿರತೆಗಳ ಜೊತೆಗೆ ಕಾದಾಟ ಮಾಡಿದ ಕಾರಣಕ್ಕೆ ಗಾಯಗೊಂಡು ಹೆಣ್ಣು ಚಿರತೆ ಸಾವನ್ನಪ್ಪಿದೆ ಎಂದು ಚೀತಾ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷಾ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಂದ 20 ಚೀತಾಗಳನ್ನು ಕರೆತರಲಾಗಿತ್ತು. ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನವಾದ ಸೆಪ್ಟಂಬರ್ 17ರಂದು ಚಿರತೆಗಳ ಮೊದಲ ತಂಡ ಭಾರತಕ್ಕೆ ಆಗಮಿಸಿತ್ತು.