ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಪೂರ್ವಾನ್ವಯ ಜೊತೆಗೆ ತುಟ್ಟಿಭತ್ಯೆ, ಪಿಂಚಣಿ ಹೆಚ್ಚಳ
Tuesday, May 30, 2023
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಪೂರ್ವಾನ್ವಯ ಜೊತೆಗೆ ತುಟ್ಟಿಭತ್ಯೆ, ಪಿಂಚಣಿ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶದಿಂದ ತುಟ್ಟಿಭತ್ಯೆ, ನೌಕರರ ಮೂಲವೇತನದ ಶೇ. 31ರಿಂದ ಶೇ. 35ಕ್ಕೆ ಹೆಚ್ಚಳವಾಗಲಿದೆ.
5.20 ಲಕ್ಷ ಸರ್ಕಾರಿ ನೌಕರರು, ನಿಗಮ ಮಂಡಳಿ, ಅನುದಾನಿತ ಸಂಸ್ಥೆಗಳ ನೌಕರರು ಹಾಗೂ 4.5 ಲಕ್ಷ ಪಿಂಚಣಿದಾರರು ಈ ಆದೇಶದ ನೇರ ಪ್ರಯೋಜನ ಪಡೆಯಲಿದ್ದಾರೆ.
ಒಂದೂವರೆ ತಿಂಗಳ ಹಿಂದೆಯೇ ತುಟ್ಟಿ ಭತ್ಯೆ ಪರಿಷ್ಕರಣೆಗೆ ಸರ್ಕಾರ ಸಿದ್ದತೆ ನಡೆಸಿತ್ತು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ತಾತ್ಕಾಲಿಕ ತಡೆ ನೀಡಿತ್ತು. ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೆ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳದ ಕಡತಕ್ಕೆ ಸಹಿ ಹಾಕಿದ್ದರು.