ಗಂಡನಿಂದ ಅತ್ತೆ, ಮಾವನನ್ನು ದೂರ ಮಾಡಿದರೆ ದಂಪತಿಗೆ ವಿಚ್ಚೇದನ: ಸುಪ್ರೀಂ ಕೋರ್ಟ್
Thursday, May 25, 2023
ಗಂಡನಿಂದ ಅತ್ತೆ, ಮಾವನನ್ನು ದೂರ ಮಾಡಿದರೆ ದಂಪತಿಗೆ ವಿಚ್ಚೇದನ: ಸುಪ್ರೀಂ ಕೋರ್ಟ್
ಮದುವೆಯಾದ ಬಳಿಕ ಪತ್ನಿಯು ತನ್ನ ಪತಿಗೆ ಅತ್ತೆ ಮಾವನಿಂದ ದೂರ ಮಾಡಿ ಬೇರ್ಪಡಿಸಲು ಪ್ರಯತ್ನ ಮಾಡಿದರೆ, ಈ ವಿಚಾರ ಪತಿಗೆ ವಿಚ್ಛೇದನ ಪಡೆಯಲು ಅರ್ಹ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಜೀವನ ನಡೆಸಲು ಸಾಧ್ಯವಾಗದು. ವಿವಾಹದ ಬಳಿಕ ಮಹಿಳೆ ತನ್ನ ಅತ್ತೆ ಮತ್ತು ಮಾವನನ್ನು ತಾಯಿ-ತಂದೆಯಂತೆ ನೋಡಿಕೊಳ್ಳಬೇಕು. ಗಂಡದ ಆದಾಯದ ಆಸೆಗೋಸ್ಕರ ವೃದ್ಧ ತಂದೆ ತಾಯಿಯನ್ನು ಅವರ ಮಗನಿಂದ ದೂರ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಪೋಷಕರು ಹುಟ್ಟಿನಿಂದಲೂ ತಾವು ದುಡಿದ ಹಣದಲ್ಲಿ ಮಕ್ಕಳನ್ನು ಸಾಕಿ ಸಲಹುತ್ತಾರೆ. ಅವರ ನಿವೃತ್ತಿ ಜೀವನದಲ್ಲಿ ಆದಾಯ ಇಲ್ಲದಿದ್ದಾಗ ಅವರನ್ನು ಮಗನಿಂದ ಬಲವಂತವಾಗಿ ಬೇರ್ಪಡಿಸಿದರೆ ಅದು ತಪ್ಪು. ಅವರ ಕೊನೆ ಕ್ಷಣದಲ್ಲಿ ಮಕ್ಕಳು ಸಾಕಿ ಸಲಹಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.