-->
ಇ-ಕೋರ್ಟ್‌ ಸೇವೆಯಲ್ಲಿ ವ್ಯತ್ಯಯ: ಡೈರಿ ಅಪ್‌ಡೇಟ್ ಇಲ್ಲದೆ ವಕೀಲರ ಪರದಾಟ

ಇ-ಕೋರ್ಟ್‌ ಸೇವೆಯಲ್ಲಿ ವ್ಯತ್ಯಯ: ಡೈರಿ ಅಪ್‌ಡೇಟ್ ಇಲ್ಲದೆ ವಕೀಲರ ಪರದಾಟ

ಇ-ಕೋರ್ಟ್‌ ಸೇವೆಯಲ್ಲಿ ವ್ಯತ್ಯಯ: ಡೈರಿ ಅಪ್‌ಡೇಟ್ ಇಲ್ಲದೆ ವಕೀಲರ ಪರದಾಟ

ಕಳೆದ ನಾಲ್ಕೈದು ದಿನಗಳಿಂದ ಇ-ಕೋರ್ಟ್‌ ಸರ್ವಿಸಸ್‌ ಆಪ್‌ನಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದ ವಕೀಲರು ತಮ್ಮ ಕೇಸುಗಳ ಅಪ್‌ಡೇಟ್ ಇಲ್ಲದೆ ದಿನನಿತ್ಯದ ಕೆಲಸಗಳಿಗೆ ಪರದಾಡುವಂತಾಗಿದೆ.

ದೆಹಲಿಯಲ್ಲಿ ಇರುವ ಸರ್ವರ್‌ನಲ್ಲೇ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಈ ಸ್ಥಗಿತತೆ ಕಂಡುಬಂದಿದೆ ಎಂದು ನ್ಯಾಯಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ.

ಸರ್ವರ್‌ನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ತಂತ್ರಜ್ಞರು ಶ್ರಮಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ.

ಅಲ್ಲಿಯವರೆಗೆ ವಕೀಲರು ನ್ಯಾಯಾಲಯದಲ್ಲಿ ಲಭ್ಯವಿರುವ ಇ-ಕೋರ್ಟ್ ಸೇವೆಯನ್ನು ಪಡೆಯಲು ಸೂಚಿಸಲಾಗಿದೆ.

Ads on article

Advertise in articles 1

advertising articles 2

Advertise under the article