ಬೊಜ್ಜು ಕರಗಿಸಿ, ಇಲ್ಲವೇ ಕಡ್ಡಾಯ ನಿವೃತ್ತಿ: ಪೊಲೀಸರಿಗೆ ಖಡಕ್ ಎಚ್ಚರಿಕೆ
Tuesday, May 16, 2023
ಬೊಜ್ಜು ಕರಗಿಸಿ, ಇಲ್ಲವೇ ಕಡ್ಡಾಯ ನಿವೃತ್ತಿ: ಪೊಲೀಸರಿಗೆ ಖಡಕ್ ಎಚ್ಚರಿಕೆ
ಪೊಲೀಸರ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಸ್ಸಾಂ ದೃಢ ಕ್ರಮ ಕೈಗೊಂಡಿದೆ. ಮುಂದಿನ ಮೂರು ತಿಂಗಳಲ್ಲಿ ದೇಹದ ಬೊಜ್ಜು ಕರಗಿಸಿ ಇಲ್ಲವೇ ಕಡ್ಡಾಯ ನಿವೃತ್ತಿ ಗ್ಯಾರಂಟಿ ಎಂದು ಅಸ್ಸಾಂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಜಿ.ಪಿ. ಸಿಂಗ್ ಪೊಲೀಸರಿಗೆ ಎಚ್ಚರಿಕೆ ನೀಡಿ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದಢೂತಿ ದೇಹದ ಹಾಗೂ ಅತಿಯಾದ ಬೊಜ್ಜು ಹೊಂದಿರುವ 680 ಸಿಬ್ಬಂದಿಯನ್ನು ಗುರುತಿಸಲಾಗಿದೆ. ವೈಯಕ್ತಿಕವಾಗಿ ಅವರಿಗೆ ಈ ವಿಷಯ ತಿಳಿಸಲಾಗಿದೆ. ಮೂರು ತಿಂಗಳು ವರ್ಕ್‌ಔಟ್ ಮಾಡಿ ತೂಕ ಇಳಿಸದಿದ್ದರೆ ಕಡ್ಡಾಯ ನಿವೃತ್ತಿ ಎಂದು ತಾಕೀತು ಮಾಡಲಾಗಿದೆ.
ಎರಡನೇ ಹಂತದ ಬೊಜ್ಜು ಹೊಂದಿರುವ 900ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಇದೇ ರೀತಿಯ ಗಡುವು ನೀಡಲಾಗಿದೆ.
ಇದರಿಂದ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯ ಮತ್ತು ಬೊಜ್ಜು ಕರಗಿಸುವ ಹೊಸ ಟಾಸ್ಕ್ ಪಡೆದುಕೊಂಡಿದ್ದಾರೆ.