-->
ಇ-ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಅಸಾಧ್ಯ; ನಿಯಂತ್ರಣ ಸಂಸ್ಥೆಯ ಅಗತ್ಯವಿದೆ ಎಂದ ನ್ಯಾ. ಬಿ.ವಿ. ನಾಗರತ್ನ

ಇ-ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಅಸಾಧ್ಯ; ನಿಯಂತ್ರಣ ಸಂಸ್ಥೆಯ ಅಗತ್ಯವಿದೆ ಎಂದ ನ್ಯಾ. ಬಿ.ವಿ. ನಾಗರತ್ನ

ಇ-ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಅಸಾಧ್ಯ; ನಿಯಂತ್ರಣ ಸಂಸ್ಥೆಯ ಅಗತ್ಯವಿದೆ ಎಂದ ನ್ಯಾ. ಬಿ.ವಿ. ನಾಗರತ್ನ





ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ಇ-ಮಾಧ್ಯಮವನ್ನು ನಿಯಂತ್ರಣ ಮಾಡಲು ನಿಯಂತ್ರಣ ಸಂಸ್ಥೆ (ರೆಗ್ಯೂಲೇಟರಿ ಬಾಡಿ)ಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರತಿಪಾದಿಸಿದ್ದಾರೆ.


ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಬಿಸಿನೆಸ್ ಸ್ಟ್ಯಾಂಡರ್ಡ್ ಸೀಮಾ ನಜರೆತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ಧಾರೆ.


ಮುಕ್ತ ಮತ್ತು ಸಮತೋಲಿತ ಮಾಧ್ಯಮ- ಪ್ರಜಾಪ್ರಭುತ್ವದ ಕಾವಲುಗಾರ ವಿಷಯದ ಕುರಿತು ಮಾತನಾಡಿದ ಅವರು, ಪತ್ರಿಕಾ ಸ್ವಾತಂತ್ಯವನ್ನು ಕಾಪಾಡಿಕೊಂಡೇ ಮಾಧ್ಯಮಗಳ ವಿರುದ್ಧದ ದೂರನ್ನು ನಿರ್ವಹಿಸುವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ ಎಂದು ಹೇಳಿದರು.


ಸುಳ್ಳು ಸುದ್ದಿ, ಪೀತ ಪತ್ರಿಕೋದ್ಯಮ ಹಾಗೂ ಮಾಧ್ಯಮಗಳಿಂದ ಭೀತಿ ಉಂಟಾಗುವ ಸಾಧ್ಯತೆ ಇದೆ. ಸುಳ್ಳು ಸುದ್ದಿ ಲಕ್ಷಾಂತರ ಜನರನ್ನು ಒಂದು ಕ್ಷಣಕ್ಕೆ ದಾರಿತಪ್ಪಿಸಬಲ್ಲುದು. ಇದು ನಮ್ಮ ಅಸ್ತಿತ್ವಕ್ಕೆ ಬುನಾದಿ ಹಾಕುವ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಮರೆಯಬಾರದು ಎಂದು ಜಸ್ಟಿಸ್ ನಾಗರತ್ನ ಕಳವಳ ವ್ಯಕ್ತಪಡಿಸಿದರು.


ಅದೇ ರೀತಿ, ಒಂದು ದೇಶ ಪ್ರಜಾಸತ್ತಾತ್ಮಕವಾಗಿ ಉಳಿಯಬೇಕಾದರೆ, ಮಾಧ್ಯಮಗಳು ನಿಜವಾದ ಅರ್ಥದಲ್ಲಿ ಮುಕ್ತ ಮತ್ತು ನಿರ್ಭೀತವಾಗಿರಬೇಕು, ಪಾರದರ್ಶಕವಾಗಿರಬೇಕು ಎಂದು ಅವರು ಹೇಳಿದರು.



Ads on article

Advertise in articles 1

advertising articles 2

Advertise under the article