ಗೃಹಲಕ್ಷ್ಮಿ: ಸಿದ್ದು ಸರ್ಕಾರದ ಮಾಸಿಕ ರೂ. 2000/- ಅತ್ತೆಗೋ... ಸೊಸೆಗೋ...
ಗೃಹಲಕ್ಷ್ಮಿ: ಸಿದ್ದು ಸರ್ಕಾರದ ಮಾಸಿಕ ರೂ. 2000/- ಅತ್ತೆಗೋ... ಸೊಸೆಗೋ...
ಪ್ರತಿ ತಿಂಗಳಿಗೆ 2000/- ರೂ. ಮನೆಯ ಮಹಿಳೆಗೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಪಂಚ ಭಾಗ್ಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು.
ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಭಾಗ್ಯ ಮನೆಯ ಮಹಿಳೆಗೆ ಸಿಗುತ್ತದೆ. ಆದರೆ, ಯಾವ ಮಹಿಳೆಗೆ ಸಿಗುತ್ತದೆ ಎಂಬುದು ಯಕ್ಷ ಪ್ರಶ್ನೆ.
ಸಿದ್ದು ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಾಸಿಕ ರೂ. 2000/- ಯಾರಿಗೆ ಸಿಗುತ್ತದೆ..? ಅತ್ತೆಗೋ... ಸೊಸೆಗೋ...? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಭಾರತೀಯ ಸಂಪ್ರದಾಯದ ಪ್ರಕಾರ, ಮನೆಯ ಯಜಮಾನಿ ಅತ್ತೆ.. ಹಾಗಾಗಿ ಮನೆಯಲ್ಲಿ ಹಿರಿಯರಾದ ಅತ್ತೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನಮ್ಮ ಸಂಸ್ಕೃತಿ ಪ್ರಕಾರ ಅತ್ತೆಯೇ ಮನೆಯ ಯಜಮಾನಿ. ಸ್ವತಃ ಅತ್ತೆಯೇ ಮುಂದೆ ಬಂದು ಸೊಸೆಗೆ ನೆರವು ನೀಡಲು ಬಯಸಿದರೆ ಮಾತ್ರ ಈ ಗೃಹಲಕ್ಷ್ಮಿ ಭಾಗ್ಯವನ್ನು ಸೊಸೆಗೆ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಧ್ವನಿ ಗೂಡಿಸಿದ್ದಾರೆ.