ಕಂಬಳ, ಜಲ್ಲಿಕಟ್ಟು: ಸುಪ್ರೀಂ ಸಂವಿಧಾನ ಪೀಠ ಗ್ರೀನ್ ಸಿಗ್ನಲ್- ಅನುಷ್ಠಾನದ ಬಗ್ಗೆ ನ್ಯಾಯಪೀಠ ಹೇಳಿದ್ದೇನು..?
ಕಂಬಳ, ಜಲ್ಲಿಕಟ್ಟು: ಸುಪ್ರೀಂ ಸಂವಿಧಾನ ಪೀಠ ಗ್ರೀನ್ ಸಿಗ್ನಲ್- ಅನುಷ್ಠಾನದ ಬಗ್ಗೆ ನ್ಯಾಯಪೀಠ ಹೇಳಿದ್ದೇನು..?
ತುಳುನಾಡಿನ
ಜಾನಪದೀಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಹಾಗೂ ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಬಂಡಿ ಓಟ
ಸೇರಿದಂತೆ ಜಾನುವಾರು ಬಳಸಿ ನಡೆಸುವ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್ ಸಂವಿಧಾನಿಕ ನ್ಯಾಯಪೀಠ ಹಸಿರು
ನಿಶಾನೆ ನೀಡಿದೆ.
ನ್ಯಾ. ಕೆ.ಎಂ. ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ.ಟಿ. ರವಿಕುಮಾರ್ ಅವರಿದ್ದ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ(PCA)ಗೆ ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಎತ್ತಿಹಿಡಿದಿದೆ. ಈ ತಿದ್ದುಪಡಿಯು ಜಲ್ಲಿಕಟ್ಟು ಕ್ರೀಡೆಗೆ ಸಾಂಪ್ರದಾಯಿಕ ನೆಲೆಯಲ್ಲಿ ನೀಡಿದ್ದ ಅನುಮತಿಯನ್ನು ನೀಡುತ್ತದೆ.
ಗೂಳಿಗಳ ನೋವು ಸಂಕಟ ಶಮನಗೊಳಿಸಿ ಕ್ರೀಡೆಯನ್ನು ಮುಂದಿವರಿಸಲು ಅನುವು ಮಾಡಿಕೊಡುವಂಥ ತಿದ್ದುಪಡಿಯನ್ನು ಜಾರಿಗೆ ತಂದಿರುವ ಸರ್ಕಾರದ ಕ್ರಮದಲ್ಲಿ ಯಾವುದೇ ಲೋಪ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತಿತರರು Vs ಭಾರತ ಒಕ್ಕೂಟ
ಸುಪ್ರೀಂಕೋರ್ಟ್