ಜುಲೈ 8: ರಾಷ್ಟ್ರೀಯ ಲೋಕ ಅದಾಲತ್: ಪ್ರಕರಣಗಳ ರಾಜಿ ಇತ್ಯರ್ಥಕ್ಕೆ ಸುವರ್ಣಾವಕಾಶ
ಜುಲೈ 8: ರಾಷ್ಟ್ರೀಯ ಲೋಕ ಅದಾಲತ್: ಪ್ರಕರಣಗಳ ರಾಜಿ ಇತ್ಯರ್ಥಕ್ಕೆ ಸುವರ್ಣಾವಕಾಶ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 8, 2023ಕ್ಕೆ ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
ರಾಷ್ಟ್ರೀಯ ಮತ್ತು ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದೇಶದ ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಪ್ರಕರಣಗಳನ್ನು ಸಂಧಾನ ಮೂಲಕ ರಾಜಿ ಇತ್ಯರ್ಥ ಮಾಡಲು ಸುವರ್ಣಾವಕಾಶ ಒದಗಿಬಂದಿದೆ.
ಮೋಟಾರು ವಾಹನ ಅಪಘಾತ, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ಇತರ ಪ್ರಕರಣಗಳ ಇತ್ಯರ್ಥಕ್ಕೆ ದಾವೆದಾರರು, ಆರೋಪಿಗಳು ಮತ್ತು ದೂರುದಾರರು ಪರಸ್ಪರ ಸಹಮತದಿಂದ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದು.
ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳಲ್ಲಿ ಶೇ. 100ರಷ್ಟು ನ್ಯಾಯಾಲಯ ಶುಲ್ಕವನ್ನು ಮರುಪಾವತಿ ಮಾಡಬಹುದಾಗಿದೆ. ರಾಜಿ ಸಂಧಾನಕ್ಕೆ ವಿಶೇಷ ಅಥವಾ ಹೆಚ್ಚುವರಿ ಯಾವುದೇ ಶುಲ್ಕ ಇರುವುದಿಲ್ಲ.
ಲೋಕ ಅದಾಲತ್‌ಗಳು ಜಾರಿಗೊಳಿಸಿರುವ ಅವಾರ್ಡ್ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಈ ಅವಾರ್ಡ್‌ಗೆ ಪ್ರಕರಣ ಇತ್ಯರ್ಥ ಪಡಿಸಿ ಹೊರಡಿಸುವ ಆದೇಶಕ್ಕೆ ಇದ್ದಷ್ಟೇ ಮಹತ್ವ ಇರುತ್ತದೆ.
.