ಮೋದಿ, ಶಾ ತಂತ್ರ ಸಂಪೂರ್ಣ ವಿಫಲ: ರಾಹುಲ್ ಗಾಂಧಿಗೆ ಕರ್ನಾಟಕ ಜೈಕಾರ
ಮೋದಿ, ಶಾ ತಂತ್ರ ಸಂಪೂರ್ಣ ವಿಫಲ: ರಾಹುಲ್ ಗಾಂಧಿಗೆ ಕರ್ನಾಟಕ ಜೈಕಾರ
ಮಹಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಮತ ಗಳಿಕೆ ಮೂಲಕ ಗೆದ್ದು ಬೀಗಿದೆ.
ಈ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡು ರಾಜ್ಯದಲ್ಲೇ ಮೊಕ್ಕಾಂ ಹೂಡಿ ಮತ ಯಾಚನೆ ನಡೆಸಿದ್ದರು. ಚುನಾವಣೆ ಘೋಷಣೆಗೆ ಮುನ್ನ ಮತ್ತು ಆ ಬಳಿಕ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ರೋಡ್ ಷೋ, ಭಾಷಣ ಮಾಡಿ ಮತದಾರರಲ್ಲಿ ಕೈ ಮುಗಿದು ಪ್ರಾರ್ಥಿಸಿದರೂ ಜನ ಅದಕ್ಕೆ ಯಾವ ಬೆಲೆಯನ್ನೂ ಕೊಡಲಿಲ್ಲ.
ರಾಜ್ಯದ ದುರಾಡಳಿತ ಮತ್ತು ಮಿತಿ ಮೀರಿದ ಭ್ರಷ್ಟಾಚಾರ, ರಾಜ್ಯದ ಬಿಜೆಪಿ ನಾಯಕರ ದುರಂಹಕಾರದ ಮಾತುಗಳಿಗೆ ಜನ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಇದೇ ವೇಳೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ದ್ವೇಷ ರಹಿತ, ವೈಚಾರಿಕ ಭಾಷಣಕ್ಕೆ ಬೆಲೆ ನೀಡಿದ್ದಾರೆ. ಭಾರತ್ ಜೋಡೋ ಎಂಬ ಪ್ರೀತಿ ಹಂಚುವ ಪಾದಯಾತ್ರೆಯ ಮೊದಲ ಯಶಸ್ಸು ಇದಾಗಿದೆ ಎಂದು ರಾಜಕೀಯ ಪಂಡಿತರು ಅಂದಾಜಿಸಿದ್ದಾರೆ. ಇದರ ಜೊತೆಗೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳೂ ಮತ ಸೆಳೆದಿವೆ ಎನ್ನುವುದೂ ಇನ್ನೊಂದು ಮಾತು.
ದಕ್ಷಿಣ ಭಾರತದಲ್ಲಿ ಶೂನ್ಯ ಸಂಪಾದನೆ!
ಈ ಮೂಲಕ ದಕ್ಷಿಣ ಭಾರತದಲ್ಲೇ ಬಿಜೆಪಿ ಯಾವುದೇ ರಾಜ್ಯದಲ್ಲೂ ಅಧಿಕಾರದಲ್ಲಿ ಉಳಿದಿಲ್ಲ. ಇದ್ದ ಏಕೈಕ ರಾಜ್ಯ ಕರ್ನಾಟಕವನ್ನೂ ಅದು ಕಳೆದುಕೊಂಡಿದೆ. ಇನ್ನು, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ತಾನಗಳಲ್ಲೂ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎನ್ನುವುದು ಗಮನಾರ್ಹ.
ಇದೆಲ್ಲವೂ, ಮುಂದಿನ ವರ್ಷ ನಡೆಯಲಿರುವ ಮಹಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.