-->
NDPS Case: ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ- ಈ ವಿಚಾರ ನಿಮಗೆ ತಿಳಿದಿರಲಿ...

NDPS Case: ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ- ಈ ವಿಚಾರ ನಿಮಗೆ ತಿಳಿದಿರಲಿ...

NDPS Case: ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ- ಈ ವಿಚಾರ ನಿಮಗೆ ತಿಳಿದಿರಲಿ...





ಗಾಂಜಾದ ತೂಕವನ್ನು ಪರಿಗಣಿಸುವಾಗ ಆ ಸಸ್ಯದ ಬೀಜ, ಎಲೆ ಮತ್ತು ಕಾಂಡಗಳನ್ನು ಗಣನೆಗೆ ತೆಗೆದುಕೊಳ್ಳಬಾರದು.



ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 2(iii)(b) ಪ್ರಕಾರ, ಗಾಂಜಾ ಎಂದರೆ ಬೀಜಗಳು ಮತ್ತು ಎಲೆಗಳು ಅಲ್ಲದ ಹೂವು ಅಥವಾ ಹಣ್ಣಿನ ಕುಡಿಗಳಾಗಿವೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.



ಇಬ್ರಾಹಿಂ ಖ್ವಾಜಾ ಮಿಯಾ ಸಯ್ಯದ್ @ ರಾಜು Vs ಮಹಾರಾಷ್ಟ್ರ ಪ್ರಕರಣದಲ್ಲಿ ನ್ಯಾ. ಅನುಜಾ ಪ್ರಭು ದೇಸಾಯಿ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.



20 ಕೆ.ಜಿ. ಗೂ ಹೆಚ್ಚಿನ ತೂಕದ ಗಾಂಜಾ ಹೊಂದಿದ್ದರೆ ಅದು ವಾಣಿಜ್ಯ ಪ್ರಮಾಣದ್ದಾಗಿದೆ. ಸದ್ರಿ ಪ್ರಕರಣದಲ್ಲಿ ಅರ್ಜಿದಾರ ಆರೋಪಿಯು 20 ಕೆ.ಜಿ. ಗೂ ಹೆಚ್ಚಿನ ಪ್ರಮಾಣದ ಗಾಂಜಾ ಹೊಂದಿದ್ದ ಎಂಬುದು ಅಭಿಯೋಜನೆಯ ವಾದ. 


ಆದರೆ, ಈ ಪ್ರಮಾಣದಲ್ಲಿ ಗಾಂಜಾದ ಜೊತೆಗೆ ಅದರ ಬೀಜಗಳು ಎಲೆಗಳು ಹಾಗೂ ಕಾಂಡಗಳು ಸೇರಿಕೊಂಡಿವೆ. ಮೂಲತಃ ಹೂವು ಮತ್ತು ಹಣ್ಣಿನ ಕುಡಿಗಳು ಒಳಗೊಂಡಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.

.

Ads on article

Advertise in articles 1

advertising articles 2

Advertise under the article