ಚೆಕ್ ಅಮಾನ್ಯ ಪ್ರಕರಣ: ಸಾಲದ ಮೊತ್ತ ತಿದ್ದುಪಡಿಗೆ ಅವಕಾಶ ಇಲ್ಲ- ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು
ಚೆಕ್ ಅಮಾನ್ಯ ಪ್ರಕರಣ: ಸಾಲದ ಮೊತ್ತ ತಿದ್ದುಪಡಿಗೆ ಅವಕಾಶ ಇಲ್ಲ- ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು
ವರ್ಗಾವಣೀಯ ಪತ್ರಗಳ ಕಾಯ್ದೆ1881ರ ಕಲಂ 138ರ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾಖಲಾಗುವ ದೂರನ್ನು ತಿದ್ದುಪಡಿ ಮಾಡಲು ಅವಕಾಶ ಇದೆ. ಆದರೆ, ದೂರಿನ ಮೂಲ ವಸ್ತುವಿಷಯವಾಗಿರುವ ಸಾಲದ ಮೊತ್ತವನ್ನು ತಿದ್ದುಪಡಿ ಮಾಡಲಾಗದು ಎಂದು ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಶಶಿಕಾಂತ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ತಿದ್ದುಪಡಿಗೆ ಅವಕಾಶ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿದೆ.
ಸದ್ರಿ ಪ್ರಕರಣದಲ್ಲಿ, ದೂರುದಾರರು ಸಾಕ್ಷ್ಯವನ್ನು ಆ ಸಾಲದ ಮೊತ್ತದ ಬಗ್ಗೆ ಸಾಕ್ಷ್ಯವನ್ನೂ ನುಡಿದಿದ್ದರು ಎಂಬುದನ್ನು ಗಮನಿಸಿದ ನ್ಯಾಯಪೀಠ, ಸಾಲದ ಮೊತ್ತವು ದೂರಿನ ಮೂಲ ಆಧಾರವಾಗಿರುತ್ತದೆ ಎಂದು ಹೇಳಿದೆ.
ದೂರಿನಲ್ಲಿ ಪ್ರಸ್ತಾಪಿಸಲಾದ ಸಾಲದ ಮೊತ್ತವನ್ನು ಬದಲಾಯಿಸುವ ತಿದ್ದುಪಡಿಗೆ ಅವಕಾಶ ನೀಡಿದರೆ, ವಿಚಾರಣೆಯ ಮಧ್ಯ ಹಂತದಲ್ಲಿ ದೂರಿನ ಚೌಕಟ್ಟು ಮತ್ತು ಮೂಲ ಸ್ವರೂಪವನ್ನೇ ಬದಲಾಯಿಸಿದ ಹಾಗೆ ಆಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಛಾಯಾಕಾಂತ್ ಆಚಾರ್ಯ Vs ಸಮಿತಾವ್ ಪಾಣಿ
ಒರಿಸ್ಸಾ ಹೈಕೋರ್ಟ್ CrMC 1218/2023 Dated 9-02-2023