Sec 138 of NI Act- ಚೆಕ್ ತಿದ್ದುಪಡಿ ಮಾಡಿದ್ದರೆ ಪಾವತಿದಾರನ ಹಕ್ಕಿಗೆ ಚ್ಯುತಿ ಬರುತ್ತದೆಯೇ...?
Monday, May 15, 2023
ಚೆಕ್ ತಿದ್ದುಪಡಿ ಮಾಡಿದ್ದರೆ ಪಾವತಿದಾರನ ಹಕ್ಕಿಗೆ ಚ್ಯುತಿ ಬರುತ್ತದೆಯೇ...?
ಚೆಕ್‌ನ ಪಾವತಿದಾರ ಅಥವಾ ಚೆಕ್ ಅನ್ನು ಹೊಂದಿರುವವರು ಚೆಕ್ ನೀಡಿದವರ ಒಪ್ಪಿಗೆ ಮೇರೆಗೆ ತಿದ್ದುಪಡಿ ಯಾ ಬದಲಾವಣೆ ಮಾಡಿದ್ದರೆ, ಅಂತಹ ತಿದ್ದುಪಡಿ ಯಾ ಬದಲಾವಣೆಯು ಪಾವತಿಸುವವರ ಅಥವಾ ಅದನ್ನು ಹೊಂದಿರುವವರ ಹಕ್ಕನ್ನು ವಿರೋಧಿಸಲು ಕಾರಣವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ರಾಜೇಂದ್ರ ಬಾದಾಮಿಕರ್ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ಹೊರಡಿಸಿದೆ.
ತಮ್ಮನ್ನು ಆರೋಪಿ ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಡಿ.ಬಿ. ಜತ್ತಿ ಎಂಬವರು ಸಲ್ಲಿಸಿದ್ದ ರಿವಿಜನ್ ಅರ್ಜಿಯನ್ನು ಈ ಮೂಲಕ ನ್ಯಾಯಪೀಠ ವಜಾಗೊಳಿಸಿದೆ.