
ಝೀರೋ ಟ್ರಾಫಿಕ್ ಬೇಡ ಎಂದ ಸಿದ್ರಾಮಯ್ಯ: ಹಾರ-ತುರಾಯಿಯೂ ತ್ಯಜ್ಯ
ಝೀರೋ ಟ್ರಾಫಿಕ್ ಬೇಡ ಎಂದ ಸಿದ್ರಾಮಯ್ಯ: ಹಾರ-ತುರಾಯಿಯೂ ತ್ಯಜ್ಯ
ಮುಖ್ಯಮಂತ್ರಿ ಅವರ ಭೇಟಿ ವೇಳೆ ಅವರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಶೂನ್ಯ ವಾಹನ ಸಂಚಾರ ವ್ಯವಸ್ಥೆಯನ್ನು ನಿಲ್ಲಿಸುವಂತೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜನರಿಗೆ ತೊಂದರೆ ಆಗುವ ಈ ವ್ಯವಸ್ಥೆಯನ್ನು ನಿಲ್ಲಿಸಿ... ಇನ್ಮುಂದೆ ಜೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಅವರು ಟ್ವೀಟ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಸಾರ್ವಜನಿಕರಿಂದ ಗೌರವ, ಸನ್ಮಾನ ರೂಪದಲ್ಲಿ ಹಾರ, ತುರಾಯಿ, ಶಾಲು- ಶಲ್ಯಗಳನ್ನು ನೀಡುವುದು ಬೇಡ.. ಅದಕ್ಕೆ ಬದಲಾಗಿ ಏನಾದರೂ ನೀಡಲೇ ಬೇಕು ಎಂತಿದ್ದರೆ ಪುಸ್ತಕ ರೂಪದ ಉಡುಗೊರೆ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ಧಾರೆ...
ಜೀರೋ ಟ್ರಾಫಿಕ್ ಸೌಲಭ್ಯ ಹಿಂದಕ್ಕೆ ಪಡೆಯುವಂತೆ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಜನರಿಗೆ ಜೀರೋ ಟ್ರಾಫಿಕ್ ನೆಪದಲ್ಲಿ ಗಂಟಗಟ್ಟಲೆ ರಸ್ತೆಯಲ್ಲಿ ಪೇಚಾಡುವ ಸ್ಥಿತಿಯಿಂದ ಮುಕ್ತಿ ದೊರೆತಂತಾಗಿದೆ.