ಅಂತಿಮ ವರದಿಯ ಕುರಿತು ಮಾಹಿತಿದಾರನಿಗೆ ಕಡ್ಡಾಯ ಮಾಹಿತಿ: ಪೊಲೀಸರಿಗೆ ಹೈಕೋರ್ಟ್ ಸೂಚನೆ
ಅಂತಿಮ ವರದಿಯ ಕುರಿತು ಮಾಹಿತಿದಾರನಿಗೆ ಕಡ್ಡಾಯ ಮಾಹಿತಿ: ಪೊಲೀಸರಿಗೆ ಹೈಕೋರ್ಟ್ ಸೂಚನೆ
ಪ್ರಥಮ ವರ್ತಮಾನ ನೀಡಿದ ಮಾಹಿತಿದಾರ ಯಾ ದೂರುದಾರನಿಗೆ ಆ ಕ್ರಿಮಿನಲ್ ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಸಿದ್ದಪಡಿಸುವ ಅಂತಿಮ ವರದಿಯ ಮಾಹಿತಿಯನ್ನು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ಆಯಾ ತನಿಖಾ ಸಂಸ್ಥೆಯ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (CrPC)ಯ ಕಲಂ 173(2)ರ ಪ್ರಕಾರ ತನಿಖಾಧಿಕಾರಿ(IO)ಯು ತನಿಖೆ ಪೂರ್ಣಗೊಂಡ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಅದೇ ಕಾಯ್ದೆಯ 173(2)(2)ರ ಪ್ರಕಾರ ಈ ಕುರಿತು ಪ್ರಥಮ ವರ್ತಮಾನ ನೀಡುವ ಮಾಹಿತಿದಾರನಿಗೆ ಕಡ್ಡಾಯವಾಗಿ ನೀಡಬೇಕು ಎಂದು ಪ್ರತಿಪಾದಿಸಿರುವ ನ್ಯಾ. ಕೆ. ನಟರಾಜನ್ ನೇತೃತ್ವದ ಏಕಸದಸ್ಯ ಪೀಠ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದೆ.
ಪ್ರಕರಣ: ಬಿ. ಪ್ರಶಾಂತ್ ಹೆಗ್ಡೆ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, WP 18864/2021 Dated 13-04-2023