ಕರಾವಳಿ ಈಗ ಅರುಣ್ ಪುತ್ತಿಲ ಟ್ರೆಂಡ್: ಪರಿವಾರದಲ್ಲಿ ಸಂಚಲನ, ನಳಿನ್ ಪ್ರತಿಷ್ಠೆಯ ಪ್ರಶ್ನೆ !
ಕರಾವಳಿ ಈಗ ಅರುಣ್ ಪುತ್ತಿಲ ಟ್ರೆಂಡ್: ಪರಿವಾರದಲ್ಲಿ ಸಂಚಲನ, ನಳಿನ್ ಪ್ರತಿಷ್ಠೆಯ ಪ್ರಶ್ನೆ !
ಪುತ್ತೂರಿನಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಈಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟ್ರೆಂಡ್ ಆಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಅರುಣ್ ಪುತ್ತಿಲ ಎಂಬ ಮಾತು ಎಲ್ಲೆಡೆ ವ್ಯಾಪಕವಾಗಿದೆ. ಟ್ರೆಂಡ್‌ಗೆ ಪರಿವಾರದ ನಾಯಕರೇ ತತ್ತರಿಸಿ ಹೋಗಿದ್ದಾರೆ.
ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ ಪುತ್ತಿಲ ಈಗ ಜಿಲ್ಲೆಯಲ್ಲಿ ಮನೆ ಮಾತಾಗುತ್ತಿದ್ದಾರೆ. ಅವರ ಪರ ಅಭಿಯಾನ ಊಹಿಸಲಾಗದಷ್ಟು ಜೋರಾಗಿದೆ. ಒಂದೇ ದಿನದಲ್ಲಿ 15000ಕ್ಕೂ ಅಧಿಕ ವಾಟ್ಸ್ಯಾಪ್ ಗ್ರೂಪ್‌ಗಳು ಸೃಷ್ಟಿಯಾಗಿದ್ದು, ಅಭಿಮಾನಿಗಳು ರಣಕೇಕೆ ಹಾಕಿ ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆಯ ಜೊತೆಗೆ ನಳಿನ್ ಹಠಾವೋ ಎಂಬ ಒತ್ತಾಯವೂ ಪ್ರಬಲವಾಗಿ ಕೇಳಿಬಂದಿದೆ.
ಬಹುತೇಕ ಅಭಿಮಾನಿಗಳು, ಬೆಂಬಲಿಗರು ಬಿಜೆಪಿ ಬೆಂಬಲಿಗರಾಗಿದ್ದಾರೆ ಎಂಬುದು ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ.
ಈ ಮಧ್ಯೆ, ಆದರ್ಶ ಗೋಖಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಂತೆ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳಬೇಡಿ ಎಂದು ಪ್ರಧಾನಿಯವರನ್ನು ಟ್ವೀಟ್ ಮೂಲಕ ಮನವಿ ಮಾಡಲಾಗಿದೆ.
.