ಮೊಬೈಲ್‌ಗಾಗಿ ಜಲಾಶಯದ ನೀರು ಖಾಲಿ ಮಾಡಿದ ಅಧಿಕಾರಿ ಸಸ್ಪೆಂಡ್, ಜೊತೆಗೆ ಬಿತ್ತು ಭರ್ಜರಿ ದಂಡ!
ಮೊಬೈಲ್‌ಗಾಗಿ ಜಲಾಶಯದ ನೀರು ಖಾಲಿ ಮಾಡಿದ ಅಧಿಕಾರಿ ಸಸ್ಪೆಂಡ್, ಜೊತೆಗೆ ಬಿತ್ತು ಭರ್ಜರಿ ದಂಡ!
ಜಲಾಶಯದಲ್ಲಿ ಬಿದ್ದ ದುಬಾರಿ ಬೆಲೆಯ ಮೊಬೈಲ್ ಫೋನ್ ಪಡೆಯಲು ಜಲಾಶಯದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದ ಅಧಿಕಾರಿಗೆ ಭರ್ಜರಿ ದಂಡ ವಿಧಿಸಲಾಗಿದೆ.
ಬೇಸಿಗೆಯಲ್ಲೂ ವಿವೇಚನೆ ಇಲ್ಲದೆ ಜಲಾಶಯದ ನೀರು ಖಾಲಿ ಮಾಡಿದ ಅಧಿಕಾರಿಗೆ 53 ಸಾವಿರ ರೂ.ಗಳ ಭರ್ಜರಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಇದೇ ವೇಳೆ, ಆಹಾರ ನಿರೀಕ್ಷಕ ರಾಜೇಸ್ ವಿಶ್ವಾಸ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಪರಲ್‌ಕೋಟ್ ಜಲಾಶಯಕ್ಕೆ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ಅವರು ತಮ್ಮ ಸ್ನೇಹಿತರೊಂದಿಗೆ ರಜಾ ಕಳೆಯಲು ಆಗಮಿಸಿದ್ದರು. ಸೆಲ್ಫಿ ತೆಗೆಯುವ ವೇಳೆ ಒಂದು ಲಕ್ಷ ರೂ. ಮೌಲ್ಯದ ಮೊಬೈಲ್ ಕೈಜಾರಿ ನೀರಿಗೆ ಬಿದ್ದಿತ್ತು.
ಅದನ್ನು ಪಡೆಯಲು ಡೀಸಲ್ ಪಂಪ್ ಬಳಸಿ ನಾಲ್ಕು ದಿನಗಳಲ್ಲಿ 41 ಲಕ್ಷ ಲೀಟರ್ ನೀರನ್ನು ಜಲಾಶಯದಿಂದ ಹೊರ ಹಾಕಲಾಗಿತ್ತು.
41 ಲಕ್ಷ ಲೀಟರ್ ನೀರನ್ನು ಪೋಲು ಮಾಡಿದ ಆಹಾರ ನಿರೀಕ್ಷಕನಿಗೆ ಈಗ ಭರ್ಜರಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಒಂದು ಕ್ಯೂಬಿಕ್ ಮೀಟರ್ ನೀರಿಗೆ 10.50 ರೂಪಾಯಿನಂತೆ 43,092 ಮತ್ತು ದಂಡವಾಗಿ 10000/- ಹೀಗೆ ಒಟ್ಟು 53,092 ರೂ.ಗಳನ್ನು ಹತ್ತು ದಿನದ ಒಳಗೆ ಪಾವತಿಸುವಂತೆ ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.
ಅನುಮತಿ ಇಲ್ಲದೆ ನೀರು ಖಾಲಿ ಮಾಡಲು ಒಪ್ಪಿಗೆ ನೀಡಿದ್ದಕ್ಕೆ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಆರ್.ಕೆ. ಧಿವಾರ್ ಅವರಿಗೆ ಜಿಲ್ಲಾಧಿಕಾರಿ ನೋಟೀಸ್ ಜಾರಿಗೊಳಿಸಿದ್ದಾರೆ.
.