ದೇವಳದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ: ಟ್ರಾವಂಕೂರ್ ದೇವಸ್ವಂ ಮಂಡಳಿ
ದೇವಳದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ: ಟ್ರಾವಂಕೂರ್ ದೇವಸ್ವಂ ಮಂಡಳಿ
ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಚಟುವಟಿಕೆಯನ್ನು ನಡೆಸುವಂತಿಲ್ಲ ಎಂದು ಟ್ರಾವಂಕೂರು ದೇವಸ್ವಂ ಮಂಡಳಿ ಸುತ್ತೋಲೆಯನ್ನು ಹೊರಡಿಸಿದೆ.
ದಕ್ಷಿಣ ಭಾರತದಲ್ಲಿ ಸುಮಾರು 1200 ದೇವಾಲಯಗಳ ಅಧೀನ ಹೊಂದಿರುವ ಟಿಡಿಬಿ 2016ರಲ್ಲೂ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿತ್ತು.
ಆದರೆ, ಈ ಬಾರಿ ತಾನು ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತನ್ನ ಅಧೀನ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಖಡಕ್ ಆದೇಶ ನೀಡಿದೆ.
ದೇವಾಲಯದ ಆವರಣವನ್ನು ದೇವಾಲಯದ ಆಚರಣೆಗಳು ಮತ್ತು ಉತ್ಸವಗಳಿಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಎಂದು ಸ್ಪಷ್ಟವಾಗಿ ತನ್ನ ಅಧೀನ ದೇವಾಲಯಗಳಿಗೆ ತಿಳಿಸಿದೆ.
ದೇವಾಲಯಗಳಲ್ಲಿ ಭಕ್ತರಿಗೆ, ಅವರು ಕೈಗೊಳ್ಳುವ ಪೂಜೆಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ತಿಳಿಸಿರುವ ದೇವಸ್ವಂ ಮಂಡಳಿಯ ಅಧ್ಯಕ್ಷ ಅನಂತಗೋಪನ್, ದೇವಸ್ಥಾನಗಳಲ್ಲಿ ಕೆಲವು ರಾಜಕೀಯ ನಾಯಕರ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಇದು ದೇವಾಲಯದ ಪಾವಿತ್ರ್ಯವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.
ಸುತ್ತೋಲೆ ಹೊರಡಿಸಿರುವ ಕ್ರಮದ ಹಿಂದೆ ಯಾವುದೇ ರಾಜಕೀಯ ಒತ್ತಡವಿಲ್ಲ. ದೇವಾಲಯದ ನಿರ್ಧಾರಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಸ್ತಕ್ಷೇಪ ನಡೆಸಬಾರದು ಎಂದು ಟಿಡಿಬಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
.