-->
ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌



ಮೇ 22ರಿಂದ ಜುಲೈ 3ರ ವರೆಗೆ ಸುಪ್ರೀಂ ಕೋರ್ಟ್‌ ಬೇಸಿಗೆ ರಜೆಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.



ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ 14 ವಿಭಾಗೀಯ ಪೀಠಗಳನ್ನು ರಚಿಸಿದ್ದಾರೆ. ಹಿಂದಿನ ವರ್ಷ ಏಳು ವಾರ ರಜೆ ಘೋಷಿಸಲಾಗಿತ್ತು. 


ಈ ಬಾರಿ ಆರು ವಾರದ ರಜೆಯನ್ನು ಬೇಸಿಗೆ ರಜೆ ಎಂದು ಘೋಷಿಸಲಾಗಿದೆ.


2023 ಮೇ 22ರಿಂದ ಮೇ 26ರ ವರೆಗೆ:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ ಸಂಜಯ್‌ ಕರೋಲ್‌


2. ನ್ಯಾ. ಜೆ ಕೆ ಮಹೇಶ್ವರಿ ಮತ್ತು ನ್ಯಾ. ಪಿ ಎಸ್‌ ನರಸಿಂಹ


ಮೇ 27- ಮೇ 28 (ಶನಿವಾರ-ಭಾನುವಾರ):


1. ನ್ಯಾ. ಪಂಕಜ್‌ ಮಿತ್ತಲ್‌ ಮತ್ತು ನ್ಯಾ. ಸಂಜಯ್‌ ಕರೋಲ್‌


2. ನ್ಯಾ. ಜೆ ಕೆ ಮಹೇಶ್ವರಿ ಮತ್ತು ನ್ಯಾ. ಪಿ ಎಸ್‌ ನರಸಿಂಹ


ಮೇ 20ರಿಂದ ಜೂನ್‌ 4:


1. ನ್ಯಾ. ಬೆಲಾ ಎಂ ತ್ರಿವೇದಿ ಮತ್ತು ನ್ಯಾ. ದೀಪಾಂಕರ್ ದತ್ತ


2. ನ್ಯಾ. ಸುಧಾಂಶು ಧುಲಿಯಾ ಮತ್ತು ನ್ಯಾ. ಪಂಕಜ್ ಮಿತ್ತಲ್


ಜೂನ್‌ 5ರಿಂದ ಜೂನ್‌ 11:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ. ರಾಜೇಶ್‌ ಬಿಂದಾಲ್‌


2. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


ಜೂನ್‌ 12:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ. ರಾಜೇಶ್‌ ಬಿಂದಾಲ್


2. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


ಜೂನ್‌ 13ರಿಂದ ಜೂನ್‌ 18:


1. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


2. ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ರಾಜೇಶ್‌ ಬಿಂದಾಲ್


ಜೂನ್‌ 19ರಿಂದ ಜೂನ್‌ 25:


1. ನ್ಯಾ. ಸೂರ್ಯಕಾಂತ್‌ ಮತ್ತು ನ್ಯಾ. ಎಂ ಎಂ ಸುಂದರೇಶ್‌


2. ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ಮನೋಜ್‌ ಮಿಶ್ರಾ


ಜೂನ್‌ 26 ಮತ್ತು ಜುಲೈ 2:


1. ನ್ಯಾ. ಎ ಎಸ್‌ ಓಕಾ ಮತ್ತು ನ್ಯಾ. ಮನೋಜ್‌ ಮಿಶ್ರಾ


2. ನ್ಯಾ. ಎ ಎಸ್‌ ಬೋಪಣ್ಣ ಮತ್ತು ನ್ಯಾ. ದೀಪಾಂಕರ್ ದತ್ತ



Ads on article

Advertise in articles 1

advertising articles 2

Advertise under the article