-->
NI Act Sec 143 A - ಚೆಕ್ ಅಮಾನ್ಯ ಪ್ರಕರಣ: ಮಧ್ಯಂತರ ಪರಿಹಾರ ಕಡ್ಡಾಯವಲ್ಲ- ಹೈಕೋರ್ಟ್‌

NI Act Sec 143 A - ಚೆಕ್ ಅಮಾನ್ಯ ಪ್ರಕರಣ: ಮಧ್ಯಂತರ ಪರಿಹಾರ ಕಡ್ಡಾಯವಲ್ಲ- ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಮಧ್ಯಂತರ ಪರಿಹಾರ ಕಡ್ಡಾಯವಲ್ಲ- ಹೈಕೋರ್ಟ್‌





ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರಿಗೆ ಚೆಕ್ ಮೊತ್ತದ ಶೇಕಡಾ 20ರಷ್ಟು ಪರಿಹಾರ ನೀಡಬೇಕಾದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸುವುದು ಕಡ್ಡಾವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.



ಎನ್.ಐ. ಆಕ್ಟ್ -1881ರ ಕಲಂ 143 A ಅಡಿಯಲ್ಲಿ ದೂರುದಾರ ಮಧ್ಯಂತರ ಪರಿಹಾರಕ್ಕೆ ಅರ್ಜಿ ಹಾಕಿದರೆ, ಅದನ್ನು ಪುರಸ್ಕರಿಸುವುದು ಕಡ್ಡಾಯವಲ್ಲ. ಆದರೆ, ಅರ್ಜಿಯನ್ನು ಪುರಸ್ಕರಿಸಿದರೆ ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿದ 60 ದಿನದೊಳಗೆ ಆರೋಪಿತರು ಪರಿಹಾರದ ಮೊತ್ತವನ್ನು ಪಾವತಿಸಬೇಕು. ಕೋರಿಕೆ ಮೇರೆಗೆ ಈ ಅವಧಿಯನ್ನು 30 ದಿನದೊಳಗೆ ವಿಸ್ತರಿಸಬಹುದು.



ಆದರೆ, ಒಂದು ವೇಳೆ, ಆರೋಪಿ ಖುಲಾಸೆಯಾದ ಪಕ್ಷದಲ್ಲಿ ಮಧ್ಯಂತರ ಪರಿಹಾರ ರೂಪದಲ್ಲಿ ಪಡೆದ ಮೊತ್ತವನ್ನು ಬಡ್ಡಿ ಸಹಿತ 60ರಿಂದ 90 ದಿನದೊಳಗೆ ಹಿಂದಿರುಗಿಸಬೇಕು.



ಹೀಗೆ, ಮಧ್ಯಂತರ ಪರಿಹಾರ ನೀಡುವಂತೆ ಕೋರ್ಟ್ ನೀಡಿದ ಆದೇಶವನ್ನು ಆರೋಪಿತರು ಪಾಲಿಸದಿದ್ದರೆ ದೂರುದಾರರ ಆಸ್ತಿಯನ್ನು ಜಪ್ತಿಗೊಳಿಸಲು ಕ್ರಮ ಕೈಗೊಳ್ಳಬಹುದು. ದೂರುದಾರರು CrPC ಕಲಂ 421 ಅಥವಾ 357 ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.



ಸೆಕ್ಷನ್ 143 A ಅಡಿಯಲ್ಲಿ ಅಳವಡಿಸಿರುವ ನಿಯಮವನ್ನು ಮ್ಯಾಜಸ್ಟ್ರೇಟರು ಯಥಾವತ್ತಾಗಿ ಜಾರಿ ಮಾಡಲು ಬರುವುದಿಲ್ಲ. ಸೆಕ್ಷನ್ 143 A ಅಡಿ ಚೆಕ್ ಬೌನ್ಸ್ ವಿಚಾರವಾಗಿ ದೂರು ದಾಖಲಿಸಿರುವ ವ್ಯಕ್ತಿಗೆ ಪರಿಹಾರ ಪಾವತಿಸಲು ಆರೋಪಿಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟರು ತಮ್ಮ ಆದೇಶಕ್ಕೆ ಕಾರಣಗಳನ್ನು ದಾಖಲಿಸಬೇಕು.



ಆರೋಪಿ ಅಥವಾ ಚೆಕ್ ನೀಡಿದ ವ್ಯಕ್ತಿ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿಲ್ಲ ಎಂಬ ಏಕೈಕ ಕಾರಣಕ್ಕೆ ಪರಿಹಾರ ನೀಡುವಂತೆ ಆದೇಶಿಸಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

.

Ads on article

Advertise in articles 1

advertising articles 2

Advertise under the article