244 ನ್ಯಾಯಾಧೀಶರ ವರ್ಗಾವಣೆ: ನ್ಯಾಯಾಲಯದ ಬೇಸಿಗೆ ರಜೆ ಬಳಿಕ ವರ್ಗಾವಣೆ ಜಾರಿ
244 ನ್ಯಾಯಾಧೀಶರ ವರ್ಗಾವಣೆ: ನ್ಯಾಯಾಲಯದ ಬೇಸಿಗೆ ರಜೆ ಬಳಿಕ ವರ್ಗಾವಣೆ ಜಾರಿ
ಬೆಂಗಳೂರು ಹೈಕೋರ್ಟ್ ಸೇರಿದಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡಿರುವ ನ್ಯಾಯಾಧೀಶರು ಬೇಸಿಗೆ ರಜೆ ಮುಗಿಯುತ್ತಲೇ ತಮಗೆ ನಿಯೋಜಿಸಿರುವ ನ್ಯಾಯಾಲಯಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹೈಕೋರ್ಟ್ ರಿಜಿಸ್ಟ್ರಾರ್‌ಗಳು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿವಿಲ್ ನ್ಯಾಯಾಧೀಶರನ್ನು ಹೈಕೋರ್ಟ್ ಆದೇಶದ ಅನುಸಾರ ವರ್ಗಾವಣೆ ಮಾಡಲಾಗಿದೆ.
ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
11 ನ್ಯಾಯಾಂಗ ಅಧಿಕಾರಿಗಳು/ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ ಪಟ್ಟಿ
47 ನ್ಯಾಯಾಂಗ ಅಧಿಕಾರಿಗಳು/ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ ಪಟ್ಟಿ
119 ಹಿರಿಯ ಸಿವಿಲ್ ನ್ಯಾಯಾಧೀಶರ ವರ್ಗಾವಣೆ ಪಟ್ಟಿ
61 ಸಿವಿಲ್ ನ್ಯಾಯಾಧೀಶರ ವರ್ಗಾವಣೆಯ ಪಟ್ಟಿ