ಇನ್ನು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಹೈಬ್ರೀಡ್ ವಿಚಾರಣೆ: ಹೈಕೋರ್ಟ್ ಗಳಿಗೆ ಸಿಜೆಐ ಪತ್ರ
ಇನ್ನು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ
ಹೈಬ್ರೀಡ್ ವಿಚಾರಣೆ: ಹೈಕೋರ್ಟ್ ಗಳಿಗೆ ಸಿಜೆಐ ಪತ್ರ
ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ.
ಹಾಗಾಗಿ, ಹೈಬ್ರಿಡ್ ವಿಚಾರಣೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.
ಚಂದ್ರಚೂಡ್ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ
ಸೂಚನೆ ನೀಡಿದ್ದಾರೆ.
ತೆಲಂಗಾಣ ಮತ್ತು ಮದ್ರಾಸ್ ಹೈಕೋರ್ಟ್ ಗಳಲ್ಲಿಈಗಾಗಲೇ
ವರ್ಚುವಲ್ ಕಲಾಪ ನಡೆಯುತ್ತಿದೆ. ಉಳಿದ ಹೈಕೋರ್ಟ್ ಗಳಲ್ಲೂ ವರ್ಚುಲ್ / ಹೈಬ್ರೀಡ್ ವಿಚಾರಣೆಗೆ ವ್ಯವಸ್ಥೆ
ಮಾಡಿದ್ದು, ಎಲ್ಲ ಹೈಕೋರ್ಟ್ ಗಳಲ್ಲೂ ಹೈಬ್ರೀಡ್ ವಿಚಾರಣೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು
ಅವರು ಹೇಳಿದರು.
ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್.
ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ನ್ಯಾಯಪೀಠದ ಎದುರು ವಕೀಲ ಸಿದ್ಧಾರ್ಥ್ ಗುಪ್ತಾ ಮತ್ತು
ಭೌತಿಕ ವಿಚಾರಣೆಗೆ ಮಾತ್ರ ಅನುಮತಿ ಇರುವ ನ್ಯಾಯಾಲಯಗಳಲ್ಲಿ ವರ್ಚುವಲ್ ವಿಚಾರಣೆಯ ಅಗತ್ಯವನ್ನು ಪ್ರಸ್ತಾಪಿಸಿದರು.
ಆಗ ಈ ಮೌಖಿಕವಾಗಿ ಈ ವಿಷಯ ತಿಳಿಸಿದ ಚಂದ್ರಚೂಡ್
ಅವರು, ತಾವು ಒಡಿಶಾದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಮಿತಿಯ ಸದಸ್ಯ ನ್ಯಾಯಮೂರ್ತಿಗಳನ್ನು
ಭೇಟಿ ಮಾಡುವುದಾಗಿ ತಿಳಿಸಿದರು. ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತೇವೆ ಎಂದು ಭರವಸೆ
ನೀಡಿದರುಲ