60 ವರ್ಷ ದಾಟಿದವರಿಗೆ ಮಾಸಿಕ Rs. 3000 ಪಿಂಚಣಿ: ಅರ್ಜಿ ಸಲ್ಲಿಸಲು ಅರ್ಹತೆಗಳು ಇಲ್ಲಿವೆ..
60 ವರ್ಷ ದಾಟಿದವರಿಗೆ ಮಾಸಿಕ Rs. 3000 ಪಿಂಚಣಿ: ಅರ್ಜಿ ಸಲ್ಲಿಸಲು ಅರ್ಹತೆಗಳು ಇಲ್ಲಿವೆ..
ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಂಡ ಸೀನಿಯರ್ ಸಿಟಿಜನ್‌ಗೆ ಪ್ರತಿ ತಿಂಗಳು 3000 ರೂಪಾಯಿ ಮಾಸಿಕ ಪಿಂಚಣಿ ಸಿಗುವ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಿದೆ.
60 ವರ್ಷ ದಾಟಿದ ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಸೌಲಭ್ಯವನ್ನು ಕಾರ್ಮಿಕ ಇಲಾಖೆ ನೀಡಲಾಗುತ್ತಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಈ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಇಲ್ಲಿವೆ..
ಅರ್ಜಿದಾರರು 60 ಪೂರೈಸುವ ಮೊದಲು ಕನಿಷ್ಟ ಮೂರು ವರ್ಷಗಳ ಕಾಲ ಮಂಡಳಿಯ ನೋಂದಾಯಿತ ಸದಸ್ಯರಾಗಿರಬೇಕು
ಸರ್ಕಾರ ಯಾವುದೇ ಇತರ ಪಿಂಚಣಿ ಸೌಲಭ್ಯವನ್ನು ಪಡೆದಿರಬಾರದು
ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸಿ ಈ ಮಾಸಿಕ ಪಿಂಚಣಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪೂರಕ ದಾಖಲೆಗಳು:
ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
ಉದ್ಯೋಗದ ದೃಢೀಕರಣ ಪತ್ರ
ಜೀವಿತ ಪ್ರಮಾಣ ಪತ್ರ
ರೇಷನ್ ಕಾರ್ಡ್ ಪ್ರತಿ
ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್‌ಡಿ 458 ಎಲ್‌ಇಟಿ 2021 ಬೆಂಗಳೂರು ದಿನಾಂಕಳ 08-08-2022ರ ಅಧಿಸೂಚನೆಯಂತೆ ಈ ಸೌಲಭ್ಯವನ್ನು ಕೊಡಮಾಡಲಾಗುತ್ತಿದೆ.