ಸಿಎಂ ಕಾನೂನು ಸಲಹೆಗಾರರ ನೇಮಕ: ಈ ವಕೀಲ ಶಾಸಕರ ಬಗ್ಗೆ ನಿಮಗೆ ಗೊತ್ತೇ...?
Thursday, June 1, 2023
ಸಿಎಂ ಕಾನೂನು ಸಲಹೆಗಾರರ ನೇಮಕ: ಈ ವಕೀಲ ಶಾಸಕರ ಬಗ್ಗೆ ನಿಮಗೆ ಗೊತ್ತೇ...?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರನ್ನಾಗಿ ಕೊಡಗು ಜಿಲ್ಲೆಯ ವಿರಾಜಪೇಟೆಯ ಶಾಸಕ ಹಾಗೂ ಹಿರಿಯ ವಕೀಲರಾದ ಎಸ್. ಎ. ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ.
ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ, ಎಲ್ಲ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪೊನ್ನಣ್ಣ, ಚುನಾವಣೆಗೆ ಮೊದಲು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥರಾಗಿದ್ದರು.
2013-2018ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ಆ ಬಳಿಕ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿ ಸೇರಿದಂತೆ ಒಟ್ಟು ಆರು ವರ್ಷಗಳ ಕಾಲ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಪೊನ್ನಣ್ಣ ಕಾನೂನು ಸೇವೆ ಸಲ್ಲಿಸಿದ್ದರು.