ಸುಸ್ತಿದಾರರ ವಾಸ ನ್ಯಾಯವ್ಯಾಪ್ತಿ ಮೀರಿದೆ ಎಂಬ ಕಾರಣಕ್ಕೆ ಕಮರ್ಷಿಯಲ್ ಕೋರ್ಟ್ ಅಮಲ್ಜಾರಿ ಅರ್ಜಿ ತಿರಸ್ಕರಿಸಲಾಗದು: ಹೈಕೋರ್ಟ್
Thursday, June 1, 2023
ಸುಸ್ತಿದಾರರ ವಾಸ ನ್ಯಾಯವ್ಯಾಪ್ತಿ ಮೀರಿದೆ ಎಂಬ ಕಾರಣಕ್ಕೆ ಕಮರ್ಷಿಯಲ್ ಕೋರ್ಟ್ ಅಮಲ್ಜಾರಿ ಅರ್ಜಿ ತಿರಸ್ಕರಿಸಲಾಗದು: ಹೈಕೋರ್ಟ್
ಸುಸ್ತಿದಾರರ ವಾಸ ಯಾ ವಿಳಾಸವು ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಗಿದೆ ಎಂಬ ಕಾರಣಕ್ಕೆ ಡಿಕ್ರಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ ಅಮಲ್ಜಾರಿ ಅರ್ಜಿಯನ್ನು ಕಮರ್ಷಿಯಲ್ ಕೋರ್ಟ್ ತಿರಸ್ಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
MORE ARTICLE
ನ್ಯಾ. ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸುಂದರಂ ಫೈನಾನ್ಸ್ ಲಿ. (ಸುಪ್ರ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಭೌಗೋಳಿಕ ವ್ಯಾಪ್ತಿಯನ್ನು ಮೀರಿದೆ ಎಂಬ ಕಾರಣಕ್ಕೆ ಅಮಲ್ಜಾರಿ ಅರ್ಜಿಯನ್ನು ತಿರಸ್ಕರಿಸಿದ ಝಾನ್ಸಿ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ತೀರ್ಪು ನೀಡಿತು.
ಪ್ರಕರಣ: M/s ಇಮ್ಯಾಜಿನ್ ಫ್ಯಾಶನ್ ಅಪಾರೆಲ್ ಪ್ರೈ ಲಿ. Vs. ಪೀಠಾಸೀನ ಅಧಿಕಾರಿ, ಕಮರ್ಷಿಯಲ್ ಕೋರ್ಟ್ ಮತ್ತಿತರರು
ಅಲಹಾಬಾದ್ ಹೈಕೋರ್ಟ್ Dated: 18-05-2023