ಈ ವಾರದ ಶನಿವಾರ ಕೋರ್ಟ್ ಕಲಾಪಕ್ಕೆ ರಜೆ ಇಲ್ಲ! ಯಾಕೆ ಗೊತ್ತೇ...?
Tuesday, June 20, 2023
ಈ ವಾರದ ಶನಿವಾರ ಕೋರ್ಟ್ ಕಲಾಪಕ್ಕೆ ರಜೆ ಇಲ್ಲ! ಯಾಕೆ ಗೊತ್ತೇ...?
ಸಾಮಾನ್ಯವಾಗಿ ತಿಂಗಳ ನಾಲ್ಕನೇ ಶನಿವಾರ ಕೋರ್ಟ್ ಕಲಾಪಕ್ಕೆ ರಜೆ ಇರುತ್ತದೆ. ಆದರೆ, ಅರ್ಧ ದಿನ ಕೋರ್ಟ್ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರತರಾಗಿರುತ್ತಾರೆ.
ಆದರೆ, ವಿಶೇಷ ಎಂದರೆ 2023ರ ಜೂನ್ ತಿಂಗಳಿನ ನಾಲ್ಕನೇ ಶನಿವಾರ ರಾಜ್ಯದ ಎಲ್ಲ ಕಡೆಗಳಲ್ಲೂ ಕೋರ್ಟ್ ಕಲಾಪಗಳು ನಡೆಯುತ್ತವೆ.
ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್ 3ರಂದು ರಜೆ ನೀಡಿದ್ದ ಕಾರಣ ಈ ರಜೆಯನ್ನು ಜೂನ್ ತಿಂಗಳ ನಾಲ್ಕನೇ ಶನಿವಾರ ಕರ್ತವ್ಯದ ದಿನ ಎಂದು ಪರಿಗಣಿಸಬೇಕು ಎಂದು ಹೈಕೋರ್ಟ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳು ನ್ಯಾಯಿಕ ಕರ್ತವ್ಯದ ದಿನ ಎಂದು ಪರಿಗಣಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಭರತ್ ಕುಮಾರ್ ಅವರು ದಿನಾಂಕ 31-03-2023ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.