ಬಿಜೆಪಿಗೆ ಮಾನಹಾನಿ: ರಾಹುಲ್, ಸಿದ್ದು, ಡಿಕೆಶಿ ವಿರುದ್ಧ ದೂರು ಪರಿಗಣಿಸಿದ ವಿಶೇಷ ನ್ಯಾಯಾಲಯ!
ಬಿಜೆಪಿಗೆ ಮಾನಹಾನಿ: ರಾಹುಲ್, ಸಿದ್ದು, ಡಿಕೆಶಿ ವಿರುದ್ಧ ದೂರು ಪರಿಗಣಿಸಿದ ವಿಶೇಷ ನ್ಯಾಯಾಲಯ!
ಭ್ರಷ್ಟಾಚಾರದ ದರ ಪಟ್ಟಿ, ಕೋವಿಡ್ ಸಾಮಾಗ್ರಿ ಖರೀದಿಯಲ್ಲಿ ಲಂಚ, ಟ್ರಬಲ್ ಎಂಜಿನ್ ಸರ್ಕಾರ ಪದ ಬಳಕೆಯ ಜಾಹೀರಾತು ನೀಡುವ ಮೂಲಕ ಬಿಜೆಪಿಗೆ ಮಾನಹಾನಿ ಮಾಡಲಾಗಿದೆ ಎಂಬ ದೂರನ್ನು ಬೆಂಗಳೂರು ವಿಶೇಷ ನ್ಯಾಯಾಲಯ ಸಂಜ್ಞೇಯತೆಯನ್ನು ಪಡೆದುಕೊಂಡಿದೆ.
ಬಿಜೆಪಿಯನ್ನು ಪ್ರತಿನಿಧಿಸಿ ಕೆಪಿಸಿಸಿಯನ್ನು ಎದುರುವಾದಿ/ಆರೋಪಿಯನ್ನಾಗಿ ಮಾಡಿ ದಾಖಲಿಸಲಾದ ಈ ದೂರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ (XLII Addl CMM)ದ ನ್ಯಾಯಾಧೀಶರಾದ ಜೆ.ಪ್ರೀತ್ ಪರಿಗಣನೆಗೆ ತೆಗೆದುಕೊಂಡರು.
ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್ ಜಾಹೀರಾತನ್ನು ನೀಡಿತ್ತು.
ದೂರು ಮತ್ತು ಅವರ ಪರ ವಕೀಲರು ಮಂಡಿಸಿದ ವಾದವನ್ನು ಪರಿಶೀಲಿಸಿದ ಬಳಿಕ ಮೇಲ್ನೋಟಕ್ಕೆ ಅಪರಾಧದ ಕಾಗ್ನಿಸೆನ್ಸ್ ತೆಗೆದುಕೊಂಡ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆ 27-07-2023ರಂದು ನಡೆಸಲಿದೆ.
ಜಾಹೀರಾತುಗಳು ಯಾವುದೇ ಪುರಾವೆಯನ್ನು ಹೊಂದಿಲ್ಲ ಮತ್ತು ಸುಳ್ಳು-ನಕಲಿ ಆರೋಪಗಳ ಮೂಲಕ ಬಿಜೆಪಿಯ ಮತಗಳಿಕೆಯ ಅವಕಾಶವನ್ನು ಕಡಿಮೆ ಮಾಡಿದೆ ಎಂದು ಆರೋಪಿಸಲಾಗಿದೆ.
.