ಆದೇಶ, ತೀರ್ಪುಗಳಿಗೆ ಪ್ಯಾರಾ ಸಂಖ್ಯೆ: ಎಲ್ಲ ಕೋರ್ಟ್‌ಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ಆದೇಶ, ತೀರ್ಪುಗಳಿಗೆ ಪ್ಯಾರಾ ಸಂಖ್ಯೆ: ಎಲ್ಲ ಕೋರ್ಟ್‌ಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ತೀರ್ಪನ್ನು ಓದಲು ಮತ್ತು ಅರ್ಥೈಸಿಕೊಳ್ಳಲು ಅನುಕೂಲ ಆಗುವಂತೆ ಎಲ್ಲ ನ್ಯಾಯಾಲಯಗಳು ತಮ್ಮ ಆದೇಶ ಮತ್ತು ತೀರ್ಪುಗಳಿಗೆ ಪ್ಯಾರಾ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಮತ್ತು ನ್ಯಾಯಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿಗಳ ಆದೇಶದ ಪ್ರಕಾರ ಕರ್ನಾಟಕ ಹೈಕೋರ್ಟ್‌ನ ರಿಜಸ್ಟ್ರಾರ್(ನ್ಯಾಯಾಂಗ) ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಬಿ.ಎಸ್. ಹರಿ ಕಮಾಂಡೆಂಟ್ Vs ಯೂನಿಯನ್ ಆಫ್ ಇಂಡಿಯಾ (Crl.A. No. 1890/204) ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ದೇಶದ ಎಲ್ಲ ನ್ಯಾಯಾಲಯಗಳು ಹೊರಡಿಸುವ ಆದೇಶ ಮತ್ತು ತೀರ್ಪುಗಳಿಗೆ ಪ್ಯಾರಾ ಸಂಖ್ಯೆಯನ್ನು ಅಳವಡಿಸುವಂತೆ ನಿರ್ದೇಶ ನೀಡಿತು.
ಶಕುಂತಳಾ ಶುಕ್ಲ Vs ಉತ್ತರ ಪ್ರದೇಶ ಪ್ರಕರಣದಲ್ಲೂ ಇದೇ ವಿಷಯವನ್ನು ಪುನರುಚ್ಚರಿಸಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Vs ಅಜಯ್ ಕುಮಾರ್ ಸೂದ್ ಪ್ರಕರಣದಲ್ಲೂ ಪ್ಯಾರಾ ಸಂಖ್ಯೆಯನ್ನು ನೀಡುವುದರಿಂದ ಸುದೀರ್ಘ ತೀರ್ಪುಗಳನ್ನು ಓದಲು ಅನುಕೂಲವಾಗುತ್ತದೆ ಎಂದು ಹೇಳಲಾಗಿತ್ತು ಎಂಬುದನ್ನು ಹೈಕೋರ್ಟ್ ಸುತ್ತೋಲೆಯಲ್ಲಿ ಹೇಳಲಾಗಿದೆ.