ರಾಜ್ಯ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಾನೂನು ಅಧಿಕಾರಿಗಳ ಸಹಿತ 806 ಹುದ್ದೆಗೆ ನೇಮಕಾತಿ!
ರಾಜ್ಯ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಾನೂನು ಅಧಿಕಾರಿಗಳ ಸಹಿತ 806 ಹುದ್ದೆಗೆ ನೇಮಕಾತಿ!
ರಾಜ್ಯದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾಲಿ ಇರುವ 806 ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.
450 ಸಹಾಯಕರು, 350 ಅಧಿಕಾರಿಗಳು ಹಾಗೂ ಕಾನೂನು ಅಧಿಕಾರಿಗಳ ಸಹಿತ 806 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ನೇಮಕಾತಿ ನಡೆಸುತ್ತಿದೆ.
ವಿದ್ಯಾರ್ಹತೆ:
ಆಫೀಸ್ ಅಸಿಸ್ಟಂಟ್ - ಯಾವುದೇ ಪದವಿ
ಆಫೀಸರ್ - ಬ್ಯಾಂಕಿಂಗ್, ಕೃಷಿ, ಹಣಕಾಸು, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶು ವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್ ವಿಷಯದಲ್ಲಿ ಕನಿಷ್ಟ 50 ಶೇಕಡಾ ಅಂಕದೊಂದಿಗೆ ಪದವಿ
ಲಾ ಆಫೀಸರ್- ಕನಿಷ್ಟ 50 ಶೇಕಡಾ ಅಂಕದೊಂದಿಗೆ ಕಾನೂನು ಪದವಿ, ಎರಡು ವರ್ಷದ ಅನುಭವ
ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆಫೀಸ್ ಅಸಿಸ್ಟಂಟ್ ಹಾಗೂ ಆಫೀಸರ್ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವಾಗ ಕೈಬರಹದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
ಅಭ್ಯರ್ಥಿಯ ಬ್ಯಾಂಕ್ ಖಾತೆ ಹೊಂದಿರಬೇಕು, ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ನೇಮಕವಾಗುವ ಸಮಯದಲ್ಲಿ CIBIL ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 21, 2023
ಹೆಚ್ಚಿನ ವಿವರಗಳಿಗೆ ಅಧಿಸೂಚನೆಯನ್ನು ನೋಡಬಹುದು.
www.ibps.in