ಸುಪ್ರೀಂ ಕೋರ್ಟ್‌ನಲ್ಲಿ ರೋಸ್ಟರ್ ಪದ್ಧತಿ: ವೈಜ್ಞಾನಿಕ ಬದಲಾವಣೆಗೆ ಮುನ್ನುಡಿ ಬರೆದ ಸಿಜೆಐ
ಸುಪ್ರೀಂ ಕೋರ್ಟ್‌ನಲ್ಲಿ ರೋಸ್ಟರ್ ಪದ್ಧತಿ: ವೈಜ್ಞಾನಿಕ ಬದಲಾವಣೆಗೆ ಮುನ್ನುಡಿ ಬರೆದ ಸಿಜೆಐ
ಬೇಸಿಗೆ ರಜೆ (ಸಮ್ಮರ್ ವೆಕೇಶನ್) ಮುಗಿದ ಬಳಿಕ ಸುಪ್ರೀಂ ಕೋರ್ಟ್ ಜುಲೈ 3ರಂದು ಆರಂಭಗೊಳ್ಳಲಿದ್ದು, ಹೊಸ ಪ್ರಕರಣಗಳ ನಿಯೋಜನೆಗೆ ಹೊಸ ರೋಸ್ಟರ್ ವ್ಯವಸ್ಥೆ ಜಾರಿಗೆ ಬರಲಿದೆ.
ಇದೊಂದು ವೈಜ್ಞಾನಿಕ ಪದ್ಧತಿಯಾಗಿ ರೂಪುಗೊಳ್ಳಲಿದ್ದು, ಇದಕ್ಕೆ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮುನ್ನುಡಿ ಬರೆದಿದ್ದಾರೆ.
ಪ್ರಕರಣದ ದಾಖಲೀಕರಿಸುವ ಹಂತದಲ್ಲೇ ಆ ಪ್ರಕರಣದ ವರ್ಗ ಆಧರಿಸಿ ಸ್ಪೆಷಲಿಸ್ಟ್ ನ್ಯಾಯಮೂರ್ತಿ ಯಾ ನ್ಯಾಯಪೀಠಕ್ಕೆ ಪರಿಗಣಿಸುವ ವೈಜ್ಞಾನಿಕ ರೋಸ್ಟರ್ ಪದ್ಧತಿ ಇದಾಗಿದೆ. ಜುಲೈ 3ರಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದೆ.
ಒಂದಷ್ಟು ನ್ಯಾಯಮೂರ್ತಿಗಳು ನಿವೃತ್ತರಾಗಿದ್ದಾರೆ, ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಈಗ ಪ್ರಕರಣಗಳ ಮರು ವಿಂಗಡನೆ ಮತ್ತು ರೀ ಲಿಸ್ಟಿಂಗ್ ಅಗತ್ಯವಿದೆ. ನ್ಯಾಯಪೀಠಗಳ ಪಾರದರ್ಶಕತೆ, ನಿಖರತೆ ಮತ್ತು ನಿರ್ದಿಷ್ಟ ಗುರಿ ತಲುಪುವ ನಿಟ್ಟಿನಲ್ಲಿ ಪರಿಣಾಮಕಾರಿ ನ್ಯಾಯದಾನದ ವೈಜ್ಞಾನಿಕ ರೋಸ್ಟರ್ ಪದ್ಧತಿ ಹೊಸ ವೈಜ್ಞಾನಿಕ ಬದಲಾವಣೆಯಾಗಿದ್ದು, ಇದೊಂದು ಹೊಸ ಮೈಲುಗಲ್ಲಾಗಲಿದೆ.
ಜುಲೈ 3, 2023ರ ಸೋಮವಾರದಿಂದಲೇ ಸ್ವಯಂ ಚಾಲಿತ ಪಟ್ಟಿ ಮಾಡುವ ವಿಧಾನ ಜಾರಿಗೆ ಬರಲಿದೆ. ಮಂಗಳವಾರದ ನಂತರ ಪರಿಶೀಲನೆ ನಡೆಯಲಿರುವ ಅರ್ಜಿಗಳನ್ನು ಶುಕ್ರವಾರದಂದು ಪಟ್ಟಿ ಮಾಡಲಾಗುತ್ತದೆ.
ಹೊಸ ಅರ್ಜಿಗಳನ್ನು ನಿಗದಿತ ದಿನಕ್ಕೂ ಮೊದಲೇ ಪಟ್ಟಿ ಮಾಡುವ ಅರ್ಜಿಗಳಿಗೆ ಪ್ರೊಫರ್ಮಾಗಳನ್ನು ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಅದೇ ದಿನದ ಪಟ್ಟಿ ಮಾಡಲು ಕೋರುವವರು ತುರ್ತು ಪತ್ರದೊಂದಿಗೆ ಪ್ರೊಫಾರ್ಮಾವನ್ನು ನಮೂದು ಅಧಿಕಾರಿಗೆ ನೀಡಬೇಕಿದೆ. ಈ ಪತ್ರಗಳನ್ನು ಸಿಜೆಐ ತಮ್ಮ ಊಟದ ವಿರಾಮದಲ್ಲಿ ಯಾ ಅಗತ್ಯಕ್ಕೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ.
.