ಲಿವ್ ಇನ್ ರಿಲೇಶನ್ ಜೋಡಿ ಡೈವರ್ಸ್ ಪಡೆಯಲಾಗದು: ಹೈಕೋರ್ಟ್
ಲಿವ್ ಇನ್ ರಿಲೇಶನ್ ಜೋಡಿ ಡೈವರ್ಸ್ ಪಡೆಯಲಾಗದು: ಹೈಕೋರ್ಟ್
'ಲಿವ್ ಇನ್ ರಿಲೇಶನ್'ನಲ್ಲಿ ಇರುವ ಜೋಡಿಗಳು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಲಾಗದು ಮತ್ತು ನ್ಯಾಯಾಲಯದಿಂದ ವಿಚ್ಚೇದನ ಪಡೆಯಲಾಗದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಎ.ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಹಜೀವನಕ್ಕೆ ಕಾನೂನಿನಲ್ಲಿ ಮಾನ್ಯತೆ ದೊರೆತಿಲ್ಲ. ವೈಯಕ್ತಿಕ ಕಾನೂನು ಮತ್ತು ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಆಗಿದ್ದರೆ ಮಾತ್ರ ಅದನ್ನು ದಾಂಪತ್ಯ ಜೀವನ ನಡೆಸುವ ಬಗ್ಗೆ ನ್ಯಾಯಾಲಯಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಾನ್ಯ ಮಾಡಲಾದ ಮದುವೆಯ ಪ್ರಕಾರದಲ್ಲಿ ವಿವಾಹ ಆಗಿದ್ದರೆ ಮಾತ್ರ ಈ ಪಕ್ಷಕಾರರ ವಿಚ್ಚೇದನಕ್ಕೆ ಅವಕಾಶ ನೀಡಬಹುದು. ಅದನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ಕಾನೂನು, ವಿಶೇಷ ವಿವಾಹ ಕಾಯ್ದೆ ಪ್ರಕಾರ ಮದುವೆ ಆಗದಿದ್ದರೆ ಅದನ್ನು ವಿವಾಹ ಎಂದು ಹೇಳಲಾಗದು. ಮತ್ತು ಅಂತಹ ಜೋಡಿಗೆ ವಿಚ್ಚೇದನ ಪಡೆಯುವ ಹಕ್ಕಿಲ್ಲ ಎಂದು ನ್ಯಾಯಪೀಠ ಹೇಳಿದೆ.