ರೆವೆನ್ಯೂ ಕೋರ್ಟ್‌ಗಳು ವಾಟ್ಸ್ಯಾಪ್, ಟೆಲಿಗ್ರಾಂ ಆಪ್ ಮೂಲಕ ನೋಟೀಸ್, ಸಮನ್ಸ್ ಕಳಿಸಬಹುದು- ಹೈಕೋರ್ಟ್
ರೆವೆನ್ಯೂ ಕೋರ್ಟ್‌ಗಳು ವಾಟ್ಸ್ಯಾಪ್, ಟೆಲಿಗ್ರಾಂ ಆಪ್ ಮೂಲಕ ನೋಟೀಸ್, ಸಮನ್ಸ್ ಕಳಿಸಬಹುದು- ಹೈಕೋರ್ಟ್
ನೋಟೀಸ್ ಸಮನ್ಸ್‌ಗಳನ್ನು ಇಮೇಲ್ ಅಥವಾ ಫ್ಯಾಕ್ಸ್ ಮೂಲಕ ಕಳಿಸಲು ಕಾನೂನಾತ್ಮಕ ಒಪ್ಪಿಗೆ ಇದೆ. ಅದೇ ರೀತಿ ತ್ವರಿತ ಸಂದೇಶ ಸೇವೆಗಳಾದ ವಾಟ್ಸ್ಯಾಪ್ ಅಥವಾ ಟೆಲಿಗ್ರಾಂ ಆಪ್ ಮೂಲಕವೂ ನೋಟೀಸ್ ಮತ್ತು ಸಮನ್ಸ್‌ಗಳನ್ನು ಜಾರಿಗೊಳಿಸಬಹುದು ಎಂದು ರೆವೆನ್ಯೂ ಕೋರ್ಟ್‌ಗಳಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸಮ್ಮತಿ ಸೂಚಿಸಿದೆ.
ಈ ಬಗ್ಗೆ ಕಂದಾಯ ನ್ಯಾಯಾಲಯಗಳಿಗೆ ಸೂಕ್ತ ಮಾರ್ಗಸೂಚಿ ನೀಡಿ ನಿರ್ದೇಶನ ಹೊರಡಿಸುವಂತೆ ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನೋಟೀಸ್ ಮತ್ತು ಸಮನ್ಸ್ ಜಾರಿಗೊಳ್ಳದೆ ಭೂ ಸ್ವಾಧೀನ ಹೊಂದಿರುವ ಕಕ್ಷಿದಾರರು ಕಂದಾಯ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬ ಆಗುತ್ತಿದೆ. ಈ ಅನಗತ್ಯ ವಿಳಂಬ ತಪ್ಪಿಸಲು ಹೊಸ ಮಾರ್ಗ ಅನುಸರಿಸುವಂತೆ ನ್ಯಾ. ಅರವಿಂದ ಸಿಂಗ್ ಸಾಂಗ್ವಾನ್ ಅವರಿದ್ದ ನ್ಯಾಯಪೀಠ ಆದೇಶ ಹೊರಡಿಸಿತು.
ಈ ಮೊದಲು ಟಾಂ ಟಾಂ, ಡಂಗುರ ಸಾರುವ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಇದನ್ನು ಕೋರ್ಟ್ ಅಮೀನರ ಉಪಸ್ಥಿತಿ ಮಾಡಲಾಗುತ್ತಿತ್ತು. ಆದರೆ, ಈಗ ಇಂತಹ ಪದ್ಧತಿಗಳು ಮರೆಯಾಗಿವೆ ಅಥವಾ ಅಪ್ರಸ್ತುತವಾಗಿದೆ. ಆಗ ಕಂದಾಯ ನ್ಯಾಯಾಲಯಗಳು ತಮ್ಮ ವಿವೇಚನೆ ಬಳಸಿ ಪತ್ರಿಕಾ ಪ್ರಕಟಣೆ ಹೊರಡಿಸಲು ಆದೇಶಿಸಬಹುದು ಎಂದು ನ್ಯಾಯಪೀಠ ಹೇಳಿತು.
.