NPS: ನೂತನ ಪಿಂಚಣಿ ಯೋಜನೆಯಲ್ಲಿ ಹಣ ಹಿಂಪಡೆಯಲು ಅವಕಾಶ
NPS: ನೂತನ ಪಿಂಚಣಿ ಯೋಜನೆಯಲ್ಲಿ ಹಣ ಹಿಂಪಡೆಯಲು ಅವಕಾಶ
ನೂತನ ಪಿಂಚಣಿ ಯೋಜನೆಯ ಚಂದಾದಾರರಿಗೆ ಹಣ ಹಿಂಪಡೆಯಲು ಅವಕಾಶ ಮಾಡಿ ಕೊಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಚಂದಾದಾರರಿಗೆ 60 ವರ್ಷ ತುಂಬಿದ ನಂತರ ಅವರು ತಮ್ಮ ಎನ್‌ಪಿಎಸ್ ಖಾತೆಯಲ್ಲಿ ಇರುವ ಹಣವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಹಿಂದಕ್ಕೆ ಪಡೆಯುವ ಆಯ್ಕೆಯನ್ನು ಈ ಸೌಲಭ್ಯ ನೀಡಲಿದೆ.
ಈಗಿರುವ ಸದ್ಯದ ನಿಯಮಗಳ ಪ್ರಕಾರ, ಎನ್‌ಪಿಎಸ್ ಚಂದಾದಾರರು 60 ವರ್ಷಗಳ ನಂತರ ಶೇ. 60ರಷ್ಟು ಮೊತ್ತವನ್ನು ಏಕಕಾಲಕ್ಕೆ ಒಂದೇ ಬಾರಿಗೆ ಹಿಂದಕ್ಕೆ ಪಡೆಯಬಹುದು. ಇನ್ನು ಉಳಿದ ಶೇ. 40ರಷ್ಟು ಹಣವನ್ನು ಕಡ್ಡಾಯವಾಗಿ ಪಿಂಚಣಿ ಯೋಜನೆಯೊಂದರ ಖರೀದಿಗೆ ಬಳಸಬೇಕು.
ಆದರೆ, ವ್ಯವಸ್ಥಿತವಾಗಿ ಹಣವನ್ನು ಹಿಂದಕ್ಕೆ ಪಡೆಯುವ ಯೋಜನೆ-SWP ಜಾರಿಗೆ ಜಾರಿಗೆ ಬಂದರೆ, ಮೂರು ತಿಂಗಳಿಗೊಮ್ಮೆ ಯಾ ವರ್ಷಕ್ಕೊಮ್ಮೆ ತಮ್ಮ ಪಿಂಚಣಿ ನಿಧಿಯಿಂದ ಹಣವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು.
ಎನ್‌ಪಿಎಸ್ ಖಾತೆಯಲ್ಲಿ ಇರುವ ಹಣವನ್ನು ಅಲ್ಲಿಯೇ ಏಕೆ ಉಳಿಸಿಕೊಳ್ಳಬಾರದು ಎಂದು ಪ್ರಶ್ನೆ ಹಲವರನ್ನು ಕಾಡುತ್ತಿದೆ. ಎನ್‌ಪಿಎಸ್ ಹೂಡಿಕೆಯಿಂದ ಉತ್ತಮ ಲಾಭ ಬರುತ್ತಿರುವಾಗ ಪಿಂಚಣಿ ಯೋಜನೆಯನ್ನು ಖರೀದಿಸುವುದೇಕೆ ಎಂಬುದು ಹಲವರ ಪ್ರಶ್ನೆ.
.