ವಕೀಲರ ವಿಮೆಗೆ ಹೆಸರು ನೋಂದಾಯಿಸಿಲ್ಲವೇ..? ತಕ್ಷಣ ನೋಂದಾಯಿಸಿ... ಇಲ್ಲಿದೆ ಮಹತ್ವದ ಸೂಚನೆ
ವಕೀಲರ ವಿಮೆಗೆ ಹೆಸರು ನೋಂದಾಯಿಸಿಲ್ಲವೇ..? ತಕ್ಷಣ ನೋಂದಾಯಿಸಿ... ಇಲ್ಲಿದೆ ಮಹತ್ವದ ಸೂಚನೆ
ವಕೀಲರಿಗೆ ವೈದ್ಯಕೀಯ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದರ ಸೌಲಭ್ಯ ಪಡೆಯಲು ವಿಮಾ ಪಾಲಿಸಿಗೆ ಹೆಸರು ನೋಂದಾಯಿಸಬೇಕಾಗಿದೆ. ಈ ಬಗ್ಗೆ ಈಗಾಗಲೇ ದೇಶಾದ್ಯಂತ ವಕೀಲರ ವೈಯಕ್ತಿಕ ವಿವರ, ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು.
ನೀವು ನೋಂದಾಯಿತ ವಕೀಲರಾಗಿದ್ದಲ್ಲಿ ಈ ಸೌಲಭ್ಯ ಪಡೆಯಲು ಸುಲಭವಾದ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಕೇಂದ್ರ ಸರ್ಕಾರ ಮತ್ತು ಭಾರತೀಯ ವಕೀಲರ ಪರಿಷತ್ತು ಪ್ರಾಯೋಜಿಸಿರುವ ವಿಮಾ ಯೋಜನೆಗೆ ರಾಜ್ಯದ ಎಲ್ಲ ವಕೀಲರು ತಮ್ಮ ವೈಯಕ್ತಿಕ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿತ್ತು. ಜಿಲ್ಲಾ ಹಾಗೂ ಆಯಾ ಪ್ರದೇಶದ ವಕೀಲರ ಸಂಘಗಳು ತಮ್ಮ ಸದಸ್ಯ ವಕೀಲರ ಮಾಹಿತಿ ಪಡೆದು ರಾಜ್ಯ ವಕೀಲರ ಪರಿಷತ್ತಿಗೆ ಕಳಿಸಿಕೊಡುವಂತೆ ರಾಜ್ಯ ವಕೀಲರ ಪರಿಷತ್ತು ಸೂಚನೆ ಹೊರಡಿಸಿತ್ತು.
ಆದರೆ, ಕೆಲ ವಕೀಲರ ಸಂಘಗಳು ಈ ಬಗ್ಗೆ ಅಗತ್ಯ ನಿಗದಿತ ನಮೂನೆಯಲ್ಲಿ ವಕೀಲರ ವಿವರಗಳನ್ನು ಸಲ್ಲಿಸಲು ವಿಳಂಬ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಕೀಲರಿಗೆ ನೇರವಾಗಿ ವಿಮಾ ಸೌಲಭ್ಯದ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ.
ವಕೀಲರು ವಕೀಲರ ಪರಿಷತ್ತಿನ ವೆಬ್‌ಸೈಟ್ ಮೂಲಕ ವಿವರಗಳನ್ನು ಅಪ್‌ಲೋಡ್ ಮಾಡಲು ಅವಕಾಶ ನೀಡಿದ್ದು, ಈ ಕೆಳಗಿನ ವೆಬ್ ಲಿಂಕ್ ಮೂಲಕ ವಕೀಲರು ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವ ಮೂಲಕ ಈ ವಿಮಾ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ವಿವರಗಳನ್ನು ತುಂಬಲು ಕೊನೆಯ ದಿನಾಂಕ: ಜೂನ್ 10, 2023
http://ksbc.org.in/medicalinsurance.php