-->
ಸಂಗಾತಿ ಜೊತೆ ಸೆಕ್ಸ್ ನಿರಾಕರಣೆ ಸೆಕ್ಷನ್ 498A ಅಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಸಂಗಾತಿ ಜೊತೆ ಸೆಕ್ಸ್ ನಿರಾಕರಣೆ ಸೆಕ್ಷನ್ 498A ಅಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಸಂಗಾತಿ ಜೊತೆ ಸೆಕ್ಸ್ ನಿರಾಕರಣೆ ಸೆಕ್ಷನ್ 498A ಅಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್





ಮದುವೆಯಾದ ಬಳಿಕ ತನ್ನ ಬಾಳ ಸಂಗಾತಿಯ ಜೊತೆಗೆ ಸೆಕ್ಸ್ ಮಾಡಲು ಯಾ ದೈಹಿಕ ಸಂಬಂಧ ಹೊಂದಲು ನಿರಾಕರಿಸುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 498A ಅಡಿ ದೌರ್ಜನ್ಯ ಅಪರಾಧ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ಅರ್ಜಿದಾರ ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ಪೊಲೀಸರು ದಾಖಲಿಸಿರುವ ದೂರನ್ನು ರದ್ದುಪಡಿಸಿದೆ.



ಘಟನೆಯ ವಿವರ:

2019ರಲ್ಲಿ ಪ್ರಕರಣದ ಸಂತ್ರಸ್ತೆ/ದೂರುದಾರರಾದ ಪತ್ನಿ ಎದುರುದಾರರಾದ ಪತಿಯನ್ನು ಮದುವೆಯಾಘಿದ್ದರು. 28 ದಿನಗಳ ಬಳಿಕ ಗಂಡನ ಮನೆಯನ್ನು ತೊರೆದಿದ್ದ ಪತ್ನಿ ತಮ್ಮ ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಬೆಂಗಳೂರಿನ ಜೆ.ಪಿ.ನಗರದ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 498A ಅಡಿ ದೂರು ದಾಖಲಿಸಿದ್ದರು. ಇದರ ಜೊತೆಗೆ, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 12(1)(a) ಅಡಿ ವಿವಾಹ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.



ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಎದುರುದಾರ ಪತಿ ಹಾಗೂ ಕುಟುಂಬ ಸದಸ್ಯರು ಹೈಕೋರ್ಟ್‌ ಮೊರೆ ಹೋಗಿದ್ದರು.

ದೂರುದಾರ ಪತ್ನಿಯ ದೂರಿನಲ್ಲಾಗಲೀ, ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಾಗಲೀ ಭಾರತೀಯ ದಂಡ ಸಂಹಿತೆ ಸೆಕ್ಷನ್ 498A ಅಡಿ ದೌರ್ಜನ್ಯ ಅಪರಾಧ ಸಾಬೀತುಪಡಿಸುವ ಯಾವುದೇ ಅಂಶಗಳು ಇಲ್ಲ. ಬದಲಾಗಿ ಪತಿ ಆಧ್ಯಾತ್ಮಿಕ ಕ್ಷೇತ್ರದತ್ತ ಹೊರಳಿದ್ದಾರೆ ಎಂಬ ಆರೋಪ ಇದೆ ಎಂಬುದನ್ನು ಹೈಕೋರ್ಟ್‌ ನ್ಯಾಯಪೀಠ ಗಮನಿಸಿತು.


ಪ್ರಕರಣ: ಅಯ್ಯಪ್ಪ ಎಂ.ಬಿ. Vs ಕರ್ನಾಟಕ ರಾಜ್ಯ

ಕರ್ನಾಟಕ ಹೈಕೋರ್ಟ್ CrlP 7067/2021 Dated 16-06-2023

..

Ads on article

Advertise in articles 1

advertising articles 2

Advertise under the article