-->
ವಕೀಲರ ಸಂರಕ್ಷಣಾ ಕಾಯ್ದೆ: ರಾಜ್ಯದಲ್ಲಿ ಜಾರಿಯಾಗಲಿದೆಯೇ..? ವಕೀಲರಿಗೆ ಸಿಎಂ ಹೇಳಿದ್ದೇನು..?

ವಕೀಲರ ಸಂರಕ್ಷಣಾ ಕಾಯ್ದೆ: ರಾಜ್ಯದಲ್ಲಿ ಜಾರಿಯಾಗಲಿದೆಯೇ..? ವಕೀಲರಿಗೆ ಸಿಎಂ ಹೇಳಿದ್ದೇನು..?

ವಕೀಲರ ಸಂರಕ್ಷಣಾ ಕಾಯ್ದೆ: ರಾಜ್ಯದಲ್ಲಿ ಜಾರಿಯಾಗಲಿದೆಯೇ..? ವಕೀಲರಿಗೆ ಸಿಎಂ ಹೇಳಿದ್ದೇನು..?





ಕರ್ನಾಟಕದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ವಕೀಲರ ಸಮುದಾಯ ಈಗಾಗಲೇ ನೂತನ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದ್ದು, ಶೀಘ್ರದಲ್ಲೇ ಈ ಕಾಯ್ದೆಯನ್ನು ಜಾರಿಗೊಳಿಸಲು ಬೇಡಿಕೆ ಸಲ್ಲಿಸಿದೆ.


ಕರ್ನಾಟಕ ರಾಜ್ಯ ವಕೀಲರ ಪರಿಷತ್ತು- ಕೆಎಸ್‌ಬಿಸಿ ನೇತೃತ್ವದಲ್ಲಿ ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.


ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜಸ್ತಾನದ ವಕೀಲರ ರಕ್ಷಣಾ ಕಾಯ್ದೆಯನ್ನು ಅಧ್ಯಯನ ಮಾಡಿ ಸಮಗ್ರವಾದ ಅಂಶಗಳೊಂದಿಗೆ ಕರ್ನಾಟಕದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.


ಈ ಬಗ್ಗೆ ರಾಜ್ಯದ ಹಿರಿಯ ವಕೀಲರು ಮತ್ತು ತಮ್ಮ ಕಾನೂನು ಸಲಹೆಗಾರರಿಂದ ಸಲಹೆ ಸೂಚನೆ ಪಡೆದುಕೊಂಡು ಸದನದಲ್ಲಿ ಕಾಯ್ದೆಯನ್ನು ಮಂಡಿಸುವ ಪ್ರಕ್ರಿಯೆಯನ್ನು ನಡೆಸುವುದಾಗಿ ಸಿದ್ದರಾಮಯ್ಯ ವಕೀಲರ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.


ವಕೀಲರಿಗೆ ಅನುದಾನ

ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ಧಾಗ ವಕೀಲರ ಕಲ್ಯಾಣಕ್ಕೆ 10 ಕೋಟಿ ರೂ.ಗಳ ಅನುದಾನ ನೀಡಿರುವುದಾಗಿ ಜ್ಞಾಪಿಸಿದ ಸಿದ್ದರಾಮಯ್ಯ, ಈ ಬಾರಿಯೂ ಸೂಕ್ತ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

.

Ads on article

Advertise in articles 1

advertising articles 2

Advertise under the article