ಸರ್ಕಾರಿ ಅಧಿಕಾರಿಗಳ ಆಸ್ತಿ ಪರಿಶೀಲಿಸಿ, ಸಂಪತ್ತು ವಶಪಡಿಸಿ ಎಂದ ಹೈಕೋರ್ಟ್: ದಿಢೀರ್ ಆದೇಶಕ್ಕೆ ಕಾರಣವೇನು..?
ಸರ್ಕಾರಿ ಅಧಿಕಾರಿಗಳ ಆಸ್ತಿ ಪರಿಶೀಲಿಸಿ, ಸಂಪತ್ತು ವಶಪಡಿಸಿ ಎಂದ ಹೈಕೋರ್ಟ್: ದಿಢೀರ್ ಆದೇಶಕ್ಕೆ ಕಾರಣವೇನು..?
ಭ್ರಷ್ಟಾಚಾರದಿಂದ ಸಮಾಜವೇ ರೋಸಿ ಹೋಗಿದೆ. ಇನ್ನು ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ. ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟ್ ದಿಢೀರ್ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರ್ಕಾರದ ಎಲ್ಲ ಸರ್ಕಾರಿ ಅಧಿಕಾರಿಗಳ, ಅದರಲ್ಲೂ ವಿಶೇಷವಾಗಿ ಪೊಲೀಸ್ ಅಧಿಕಾರಿಗಳ ಆಸ್ತಿ ಪರಿಶೀಲಿಸಿ, ಅಕ್ರಮ ಸಂಪತ್ತು ವಶಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾ. ಎಸ್. ಎಂ. ಸುಬ್ರಹ್ಮಣ್ಯಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಎಂ. ರಾಜೇಂದಿರನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ದೇಶದಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಇದು ಭಾರತೀಯ ಆಡಳಿತ ಸೇವೆ(IAS) ಮತ್ತು ಭಾರತೀಯ ಪೊಲೀಸ್ ಸೇವೆ(IPS) ಮತ್ತು ನ್ಯಾಯಾಂಗ ಸೇವೆಯನ್ನೂ ಬಿಟ್ಟಿಲ್ಲ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.
ತಮಿಳುನಾಡಿನಲ್ಲಿ ನಿಯಮಾನುಸಾರ ನೇಮಕಾತಿ ಆದ ಮೂರು ತಿಂಗಳಲ್ಲಿ ಮತ್ತು ಆ ನಂತರ ಪ್ರತಿ 5 ವರ್ಷಕ್ಕೊಮ್ಮೆ ಪೊಲೀಸ್ ಅಧಿಕಾರಿಗಳು ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಆಸ್ತಿ ವಿವರದಲ್ಲಿನ ವ್ಯತ್ಯಾಸ, ವೈರುಧ್ಯಗಳು ಕಂಡುಬಂದರೆ ಭ್ರಷ್ಟಾಚಾರದ ಮೂಲಕ ಸಂಪಾದಿಸಿದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ.
.